Sunday, January 19, 2025
ಕಾಸರಗೋಡುದಕ್ಷಿಣ ಕನ್ನಡಮಂಜೇಶ್ವರಸುದ್ದಿ

ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಕಣ್ಣೂರಿಗೆ ಆಗಮಿಸಿದ ಯುವಕನಲ್ಲಿ ಮಂಕಿಫಾಕ್ಸ್ ಲಕ್ಷಣ..? – ಕಹಳೆ ನ್ಯೂಸ್

ಮಂಗಳೂರು, ಜು 18 : ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಕಣ್ಣೂರಿಗೆ ಆಗಮಿಸಿದ ಯುವಕನೋರ್ವನಿಗೆ ಮಂಕಿಫಾಕ್ಸ್ ರೋಗಲಕ್ಷಣ ಕಾಣಿಸಿಕೊಂಡ ಹಿನ್ನಲೆಯಲ್ಲಿ ಆತನನ್ನು ಪರಿಯಾರಂ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿದೆ.


ಮಂಕಿಪಾಕ್ಸ್ ರೋಗ ಲಕ್ಷಣಗಳು ಕಾಣಿಸಿಕೊಂಡಿರುವ ಕಾರಣ ಯುವಕನ ಮಾದರಿ ಸಂಗ್ರಹಿಸಿ ಪುಣೆಯಲ್ಲಿರುವ ವೈರಾಲಜಿ ಕೇಂದ್ರಕ್ಕೆ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಮಾತ್ರವಲ್ಲದೆ ಯುವಕನನ್ನು ಐಸೋಲೇಶನ್‌ಗೆ ಒಳಪಡಿಸಲಾಗಿದ್ದು ನಿಗಾ ಇರಿಸಲಾಗಿದೆ. ಕೇರಳದಲ್ಲಿ ಮೊದಲ ಮಂಕಿಫಾಕ್ಸ್ ಪ್ರಕರಣ ಜು.12 ರಂದು ದಾಖಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿದೇಶದಿಂದ ಶನಿವಾರ ಮಂಗಳೂರು ಏರ್ ಪೋರ್ಟ್ ಮೂಲಕ ಆಗಮಿಸಿ ಅಲ್ಲಿಂದ ಕಣ್ಣೂರಿಗೆ ಬಂದಿದ್ದ ಯುವಕನಲ್ಲಿ ಮಂಕಿಫಾಕ್ಸ್ ಲಕ್ಷಣಗಳು ಕಾಣಿಸಿಕೊಂಡ ಹಿನ್ನಲೆ ಆತ ಸ್ವಯಂ ಆಸ್ಪತ್ರೆಗೆ ಬಂದು ದಾಖಲಾಗಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು

ನೆರೆಯ ರಾಜ್ಯದಲ್ಲಿ ಮಂಕಿಫಾಕ್ಸ್ ಕಾಣಿಸಿಕೊಂಡ ಧೃಢಪಡುತ್ತಿದ್ದಂತೆಯೇ ದ.ಕ ಜಿಲ್ಲೆಯಲ್ಲೂ ವಿದೇಶ ನಿಗಾ ಇರಿಸಲಾಗಿದ್ದು, ಮುನ್ನೆಚ್ಚರಿಕೆ ದೃಷ್ಟಿಯಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ 10 ಹಾಸಿಗೆಗಳ ಒಂದು ವಾರ್ಡ್ ನ್ನು ಮಂಕಿ ಫಾಕ್ಸ್ ಸೋಂಕಿತ ರೋಗಿಗಳಿಗೆಂದು ಮೀಸಲಿಡಲಾಗಿದೆ.