ಜೊತೆಗಿದ್ದ ಜೋಡಿಯೇ ಪ್ರೇಮಿಗಳಿಬ್ಬರ ಖಾಸಗಿ ವಿಡಿಯೋ ಚಿತ್ರಿಸಿ ಹಣಕ್ಕೆ ಬೇಡಿಕೆ – ಬ್ಲ್ಯಾಕ್ ಮೇಲ್..! ಮುಂದೇನಾಯ್ತು? – ಕಹಳೆ ನ್ಯೂಸ್
ಉಷಾ ಮತ್ತು ಸುರೇಶ್ ಬಾಬು ಬಂಧಿತ ಆರೋಪಿಗಳು. ಸದ್ಯ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಮತ್ತು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಯಲಹಂಕ ಬಳಿಯ ಖಾಸಗಿ ಹೋಟೆಲ್ ಗೆ ಹೋಗಿದ್ದ ಇಬ್ಬರು ಪ್ರೇಮಿಗಳು, ಒಂದೇ ರೂಮ್ ನಲ್ಲಿ ಎರಡು ಬಾರಿ ಭೇಟಿ ಆಗಿದ್ರು. ಈ ವೇಳೆ ಯಾರಿಗೂ ಗೊತ್ತಾಗದ ರೀತಿ ಆರೋಪಿಗಳು ಕ್ಯಾಮರಾ ಇಟ್ಟು ವಿಡಿಯೋ ಚಿತ್ರಿಕರಿಸಿದ್ದರು. ಆರೋಪಿಗಳಾದ ಉಷಾ ಮತ್ತು ಸುರೇಶ್ ಸಹ ಪ್ರೇಮಿಗಳು. ಅಲ್ಲದೆ ನೊಂದ ಮಹಿಳೆಯ ಹತ್ತಿರದ ಸಂಬಂಧಿ ಸಹ. ಆದ್ರೆ ಸಂಬಂಧಿಯಾಗಿದ್ದೇ ಇಂತಹ ಕೃತ್ಯಕ್ಕೆ ಇಳಿದು ಬ್ಲ್ಯಾಕ್ ಮೇಲ್ ಮಾಡಿದ್ದಾರೆ.
ಆರೋಪಿಗಳು ಯಾರಿಗೂ ಇಳಿಯದಂತೆ ರೂಮ್ನಲ್ಲಿ ಕ್ಯಾಮರಾ ಇಟ್ಟು ವಿಡಿಯೋ ಮಾಡಿ ಬಳಿಕ ಕೆಲ ದಿನಗಳ ನಂತರ ನೊಂದ ಮಹಿಳೆಗೆ ವಾಟ್ಸಪ್ ಮೂಲಕ ವಿಡಿಯೋ ಕಳಿಸಿದ್ದಾರೆ. ವಿಡಿಯೋ ನೋಡಿ ಮಹಿಳೆ ಶಾಕ್ ಆಗಿದ್ದಾರೆ. ಬಳಿಕ ಅದೇ ನಂಬರ್ ನಿಂದ ಇಪತ್ತೈದು ಲಕ್ಷ ಹಣ ಕೊಡಿ ಇಲ್ಲಾವಾದ್ರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಬಂದಿದೆ. ನೊಂದ ಮಹಿಳೆ ಹಣ ನೀಡಲು ತಡಮಾಡಿದಾಗ ಆರೋಪಿ ಉಷಾ ಹೊಸ ನಾಟಕ ಶುರು ಮಾಡಿದ್ದಾರೆ. ತನ್ನ ಮೊಬೈಲ್ ಗೂ ಯಾರೊ ನಿಮ್ಮ ವಿಡಿಯೋ ಕಳಿಸಿದ್ದಾರೆ ಎಂದು ಮತ್ತಷ್ಟು ಬೆದರಿಸಲು ಮುಂದಾಗಿದ್ದಾರೆ. ಜೊತೆಗೆ ಸಿಡಿ ಮಾಡಿ ಮನೆಯವರು ಹಾಗೂ ಕುಟುಂಬದ ಎಲ್ಲರಿಗೂ ಕಳಿಸುವುದಾಗಿ ಹೆದರಿಸಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಬಾಗಲೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.