Tuesday, January 21, 2025
ಬೆಂಗಳೂರುವಾಣಿಜ್ಯಸುದ್ದಿ

ಇಂದಿನಿಂದ ಕೆಎಂಎಫ್​ ಹಾಲಿನ ಉತ್ಪನ್ನಗಳ ಮೇಲೆ ( ಮೊಸರು, ಮಜ್ಜಿಗೆ, ಲಸ್ಸಿ) ಬೆಲೆ ಹೆಚ್ಚಳ – ಕಹಳೆ ನ್ಯೂಸ್

ಬೆಂಗಳೂರು: ಹಾಲಿನ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರವು ಶೇ 5ರ ಸರಕು ಸೇವಾ ಸುಂಕ (Goods and Service Tax – GST) ವಿಧಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳವು (Karnataka Milk Federation – KMF) ಮೊಸರು, ಮಜ್ಜಿಗೆ ಮತ್ತು ಲಸ್ಸಿ ಬೆಲೆಗಳನ್ನು ಹೆಚ್ಚಿಸಲು ತೀರ್ಮಾನಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿ ಉತ್ಪನ್ನದ ಮೇಲೆ ಸರಾಸರಿ ₹ 1ರಂದ ₹ 3ರವರೆಗೆ ಬೆಲೆ ಹೆಚ್ಚಾಗಲಿದೆ. ಈ ಮೊದಲು ಲೀಟರ್​ ಮೊಸರಿಗೆ ₹ 43 ಇತ್ತು. ಇಂದಿನಿಂದ (ಜುಲೈ 18) ಅದು ₹ 46 ಆಗಲಿದೆ. ಅರ್ಧ ಲೀಟರ್ ಮೊಸರಿನ ಬೆಲೆ ₹ 22 ಇತ್ತು. ನಾಳೆಯಿಂದ ₹ 24 ಆಗಲಿದೆ. ಮಜ್ಜಿಗೆ 200 ಎಂಎಲ್ ಮಜ್ಜಿಗೆ ಹಾಗೂ ಲಸ್ಸಿ ಮೇಲೆ ₹ 1 ಹೆಚ್ಚಿಸಲಾಗಿದೆ. ಪಾಕೆಟ್​ಗಳ ಮೇಲೆ ಹಳೆಯ ದರಗಳೇ ನಮೂದಾಗಿರುತ್ತವೆ. ಆದರೆ ಗ್ರಾಹಕರು ಹೊಸದಾಗಿ ನಿಗದಿಪಡಿಸಿರುವಷ್ಟು ದರ ನೀಡಿ ಖರೀದಿಸಬೇಕು ಎಂದು ಕೆಎಂಎಫ್ ಪ್ರಕಟಣೆಯಲ್ಲಿ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಲಿನಿಂದ ತಯಾರಾದ ಉತ್ಪನ್ನಗಳು (Milk Products) ಮತ್ತು ಆಹಾರ ಧಾನ್ಯಗಳಿಗೆ (Labelled Rice etc) ನೀಡಿದ್ದ ಜಿಎಸ್​ಟಿ (Goods and Service Tax – GST) ವಿನಾಯ್ತಿಯನ್ನು ಕೇಂದ್ರ ಸರ್ಕಾರ (ಜಿಎಸ್​ಟಿ ಮಂಡಳಿ) ಹಿಂಪಡೆದಿದೆ. ಇಂದಿನಿಂದಲೇ ಹೊಸ ಆದೇಶ ಜಾರಿಗೆ ಬರಲಿದೆ. ‘ನಂದಿನಿ’ ಬ್ರಾಂಡ್​ನ ಅಡಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಕರ್ನಾಟಕ ಹಾಲು ಉತ್ಪಾದನಾ ಮಹಾ ಮಂಡಳವು (Karnataka Milk Federation – KMF) ಸಹ ಮಜ್ಜಿಗೆ, ಮೊಸರು, ತುಪ್ಪ ಸೇರಿದಂತೆ ಹಲವು ಉತ್ಪನ್ನಗಳ ಬೆಲೆ ಏರಿಕೆಗೆ ನಿರ್ಧರಿಸಿದೆ.

ಜೂನ್ ತಿಂಗಳಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್​ಟಿ ಮಂಡಳಿಯ 47ನೇ ಸಭೆಯು ಹಾಲಿನ ಉತ್ಪನ್ನಗಳು ಹಾಗೂ ಆಹಾರ ಧಾನ್ಯಗಳಿಗೆ ನೀಡಿದ್ದ ವಿನಾಯ್ತಿ ತೆಗೆದುಹಾಕಲು ನಿರ್ಣ ತೆಗೆದುಕೊಂಡಿತ್ತು. ಈ ಪರಿಷ್ಕರಣೆಯು ನಾಳೆಯಿಂದಲೇ (ಜುಲೈ 18) ಜಾರಿಗೆ ಬರಲಿದೆ. ಈಗಾಗಲೇ ಹಣದುಬ್ಬರದಿಂದ ತತ್ತರಿಸಿರುವ ಭಾರತೀಯರು ಮುಂದಿನ ದಿನಗಳಲ್ಲಿ ತಮ್ಮ ಅಡುಗೆಮನೆ ಬಜೆಟ್​ ಅನ್ನು ಮತ್ತಷ್ಟು ಹೆಚ್ಚಿಸಬೇಕಾಗುತ್ತದೆ ಎಂದು ವಿಶ್ಲೇಷಿಸಲಾಗಿದೆ.

ಜಿಎಸ್​ಟಿ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಹಾಲು ಸಂಸ್ಕರಣೆ ಮತ್ತು ಹಾಲಿನ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕಂಪನಿಗಳು ಸಿದ್ಧವಾಗಿದೆ. ಕರ್ನಾಟಕದಲ್ಲಿ ಸಕ್ರಿಯವಾಗಿರುವ ಖಾಸಗಿ ಡೇರಿ ಕಂಪನಿಗಳಾದ ದೊಡ್ಲಾ ಮತ್ತು ಹೆರಿಟೇಜ್ ಸಹ ಹಾಲಿನ ಉತ್ಪನ್ನಗಳ ಬೆಲೆ ಹೆಚ್ಚಿಸಲಿವೆ ಎಂದು ‘ದಿ ಮಿಂಟ್’ ಜಾಲತಾಣ ವರದಿ ಮಾಡಿದೆ.