ರುದ್ರಗಿರಿಯ ರಣಕಹಳೆ | ಜಗದೀಶ್ ಕಾರಂತ್ ಭಾಷಣ ವಿರುದ್ದ ಜಿಲ್ಲಾಧಿಕಾರಿ ಹಾಕಿದ ಕೇಸಿನ ಚಾರ್ಜ್ ಶೀಟ್ ಗೆ ಹೈಕೋರ್ಟ್ ತಡೆಯಾಜ್ಞೆ – ಕಹಳೆ ನ್ಯೂಸ್
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾರಿಂಜ ಕ್ಷೇತ್ರದ ಪಾವಿತ್ರತೆ ಧಕ್ಕೆ ಮತ್ತು ಅಕ್ರಮ ಗಣಿಗಾರಿಕೆ ವಿರುದ್ಧ ನಡೆದ ಪ್ರತಿಭಟನೆ ” ರುದ್ರಗಿರಿಯ ರಣಕಹಳೆ ” ಕಾರ್ಯಕ್ರಮದಲ್ಲಿ ಜಗದೀಶ್ ಕಾರಂತ್ ಭಾಷಣ ಮಾಡಿದ್ದರು.
ಕಾರಂತ್ ಭಾಷಣದ ವಿರುದ್ದ ಜಿಲ್ಲಾಧಿಕಾರಿ ದೂರು ನೀಡಿ, ಕೇಸು ದಾಖಲಿಸಿದ್ದರು ಹಾಗೂ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಈಗ ಆ ಚಾರ್ಜ್ ಶೀಟ್ ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.