‘ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಗೋವು ಸಾಗಿಸುತ್ತಿದ್ದ ಮುಸ್ಲಿಂ ಡ್ರೈವರ್ ಮೇಲಿನ ಹಲ್ಲೆ ಎರಡೂ ಒಂದೇ’ ಹೇಳಿಕೆಯಿಂದ ಬ್ಯಾಕ್ ಟು ಬ್ಯಾಕ್ ಸೋಲುಂಡ ಸಾಯಿ ಪಲ್ಲವಿ ; ‘ಗಾರ್ಗಿ’ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ಸಿನಿಮಾ ಸೂಪರ್ ಆದರೂ ಸೋತಿದ್ದೇಕೆ? – ಕಹಳೆ ನ್ಯೂಸ್
ಸಾಯಿ ಪಲ್ಲವಿ ಹೊಸ ಸಿನಿಮಾ ‘ಗಾರ್ಗಿ’ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ತಮಿಳು,ತೆಲುಗು ಹಾಗೂ ಕನ್ನಡ ಭಾಷೆಯಲ್ಲಿ ಈ ಸಿನಿಮಾ ಏಕಕಾಲಕ್ಕೆ ರಿಲೀಸ್ ಆಗಿತ್ತು. ಅದರಲ್ಲೂ ಸಾಯಿ ಪಲ್ಲವಿ ಕಷ್ಟ ಪಟ್ಟು ಕನ್ನಡದಲ್ಲಿಯೇ ಡಬ್ ಮಾಡಿದ್ದರು. ಈ ಕಾರಣಕ್ಕೆ ಸಿನಿಮಾ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿತ್ತು.
‘ಗಾರ್ಗಿ’ ಕನ್ನಡದಲ್ಲಿ ಡಬ್ ಆಗಿದ್ದು, ಈ ಹಿಂದೆ ಬಿಡುಗಡೆಯಾಗಿದ್ದ ಡಬ್ ಸಿನಿಮಾಗಳಿಗಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ಅತ್ತ ತಮಿಳುನಾಡಿನಲ್ಲಿ ತಮಿಳಿನಲ್ಲೂ, ತೆಲಂಗಾಣ ಹಾಗೂ ಆಂಧ್ರದಲ್ಲಿ ತೆಲುಗಿನಲ್ಲೂ ರಿಲೀಸ್ ಆಗಿತ್ತು. ಹೀಗಿದ್ದರೂ, ಸಿನಿಮಾ ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ ಅದ್ಭುತ ಗಳಿಕೆ ಏನೂ ಮಾಡಿಲ್ಲ.
ಸಾಯಿ ಪಲ್ಲವಿ ಸಿನಿಮಾ ‘ಗಾರ್ಗಿ’ಗೆ ವಿಮರ್ಶಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಸಿನಿಮಾಗೆ ಐದಕ್ಕೆ ಐದು ಸ್ಟಾರ್ ನೀಡಿದ್ದರು. ಮೂರು ಭಾಷೆಯಲ್ಲೂ ಸಿನಿಮಾ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಸಾಯಿ ಪಲ್ಲವಿ ನಟನೆಯನ್ನು ಹೊಗಳಿಕೊಂಡಾಡಿದ್ದಾರೆ. ಹೀಗಿದ್ದರೂ, ‘ಗಾರ್ಗಿ’ ಬಾಕ್ಸಾಫೀಸ್‌ನಲ್ಲಿ ಚಮತ್ಕಾರ ಮಾಡಿಲ್ಲ. ಅಷ್ಟಕ್ಕೂ ಮೊದಲ ಮೂರು ದಿನ ಈ ಸಿನಿಮಾ ಗಳಿಸಿದ್ದೆಷ್ಟು? ಸಿನಿಮಾ ಸೋತಿದ್ದು ಯಾಕೆ? ಅನ್ನೋ ಡಿಟೈಲ್ಸ್ ಇಲ್ಲಿದೆ.
‘ಗಾರ್ಗಿ’ ಸಿನಿಮಾ ಕಲೆಕ್ಷನ್ ಎಷ್ಟು?ಸಾಯಿ ಪಲ್ಲವಿಯ ‘ಗಾರ್ಗಿ’ ಸಿನಿಮಾ ಇದೇ ಜುಲೈ 15ಕ್ಕೆ ರಿಲೀಸ್ ಆಗಿತ್ತು. ಮೂರು ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಆಗಿತ್ತು. ಭಾರತದಲ್ಲಿ ಎಲ್ಲಾ ಭಾಷೆಗಳಿಂದಲೂ ‘ಗಾರ್ಗಿ’ ಸಿನಿಮಾ ಮೂರು ದಿನಗಳಲ್ಲಿ ಸುಮಾರು 2.77 ಕೋಟಿ ರೂ. ಗಳಿಕೆಯಾಗಿದೆ ಎಂದು ಟ್ರೇಡ್ ಅನಲಿಸ್ಟ್‌ಗಳು ವರದಿ ಮಾಡಿದ್ದಾರೆ. ಸಾಯಿ ಪಲ್ಲವಿ ರೇಂಜ್‌ಗೆ ‘ಗಾರ್ಗಿ’ ಸಿನಿಮಾದ ಗಳಿಕೆ ಮೂರು ಪಟ್ಟು ಹೆಚ್ಚಾಗಬೇಕಿತ್ತು. ಆದರೆ ನಿರೀಕ್ಷೆಯಂತೆ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತಿದ್ದು, ಆ ಬಗ್ಗೆನೇ ಚರ್ಚೆಯಾಗುತ್ತಿದೆ.
‘ಗಾರ್ಗಿ’ ಕಲೆಕ್ಷನ್ ಡ್ರಾಪ್!
‘ಗಾರ್ಗಿ’ ಸಿನಿಮಾ ಮೊದಲ ಮೂರು ದಿನದ ಗಳಿಕೆ ಬಹಳ ಮುಖ್ಯ ಆಗಿತ್ತು. ಆದರೆ, ಮೊದಲ ದಿನ ಗಳಿಸಿದ್ದು ಶಾಕಿಂಗ್ ಆಗಿದೆ. ಓಳ್ಳೆ ಸಿನಿಮಾ ಅನ್ನೋ ರಿಪೋರ್ಟ್ ಬಂದಿದ್ದರೂ, ‘ಗಾರ್ಗಿ’ ಮೊದಲ ವಾರದ ನೆಲಕ್ಕಚ್ಚಿದೆ. ದಿನದಿಂದ ದಿನಕ್ಕೆ ಸಿನಿಮಾದ ಗಳಿಕೆ ಹೆಚ್ಚಾಗಿದ್ದರೂ, ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ ಮೂರು ದಿನಗಳ ‘ಗಾರ್ಗಿ’ ಕಲೆಕ್ಷನ್ ಹೀಗಿದೆ.
ಮೊದಲ ದಿನ ₹ 67 ಲಕ್ಷ
ಎರಡನೇ ದಿನ ₹ 98 ಲಕ್ಷ
ಮೂರನೇ ದಿನ ₹ 1.12 ಲಕ್ಷ
ಒಟ್ಟು ₹ 2.77 ಕೋಟಿ
2 ಸಿನಿಮಾ ಸೋಲು :
ಸಾಯಿ ಪಲ್ಲವಿಯ ಎರಡು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲುಂಡಿವೆ. ರಾಣಾ ದಗ್ಗುಬಾಟಿ ಜೊತೆ ನಟಿಸಿದ ‘ವಿರಾಟ ಪರ್ವಂ’ ಸಿನಿಮಾ ಬಿಡುಗಡೆಗೂ ಮುನ್ನ ಸದ್ದು ಮಾಡಿದ್ದರೂ, ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ‘ವೀರಾ ಪರ್ವಂ’ ತಂಡ ಸಾಯಿ ಪಲ್ಲವಿಗೆ ಲೇಡಿ ಪವರ್‌ಸ್ಟಾರ್ ಎಂಬ ಬಿರುದು ನೀಡಿತ್ತು. ಇಷ್ಟೊಂದು ನಂಬಿಕೆ ಇಟ್ಟಿದ್ದರೂ, ಸಿನಿಮಾ ಸೋಲು ಕಾಣಬೇಕಾಯಿತು. ಇನ್ನೊಂದು ಕಡೆ ‘ಗಾರ್ಗಿ’ ಚೇತರಿಕೆ ಕಾಣುತ್ತಿಲ್ಲ.
ಸಿನಿಮಾ ಸೋಲಿಗೆ ಕಾರಣವೇನು?
‘ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಗೋವು ಸಾಗಿಸುತ್ತಿದ್ದ ಮುಸ್ಲಿಂ ಡ್ರೈವರ್ ಮೇಲಿನ ಹಲ್ಲೆ ಎರಡೂ ಒಂದೇ’ ಹೇಳಿಕೆಯಿಂದ ಬ್ಯಾಕ್ ಟು ಬ್ಯಾಕ್ ಸೋಲುಂಡ ಸಾಯಿ ಪಲ್ಲವಿ ಎಂದು ಕಾಣುತ್ತಿದೆ. ಸಾಯಿ ಪಲ್ಲವಿ ಕಳೆದ ಎರಡೂ ಸಿನಿಮಾಗಳಲ್ಲೂ ಡಿಗ್ಲಾಮರ್ ರೋಲ್‌ನಲ್ಲಿಯೇ ಕಾಣಿಸಿಕೊಂಡಿದ್ದಾರೆ. ‘ವೀರಾ ಪರ್ವಂ’ ಹಾಗೂ ‘ಗಾರ್ಗಿ’ ಎರಡೂ ಸಿನಿಮಾಗಳೂ ಇದೂ ಒಂದು ಕಾರಣ. ಸಾಯಿ ಪಲ್ಲವಿಯನ್ನು ಪ್ರೇಕ್ಷಕರು ಅಳುಮುಂಜಿಯಾಗಿ ನೋಡಲು ಬಯಸುತ್ತಿಲ್ಲ ಎಂದು ಕಾಣುತ್ತಿದೆ. ಸಾಯಿ ಡ್ಯಾನ್ಸ್ ಅನ್ನು ಮೆಚ್ಚಿಕೊಂಡಿರುವ ಪ್ರೇಕ್ಷಕರಿಗೆ ಅವರನ್ನು ಕಮರ್ಷಿಯಲ್ ಸಿನಿಮಾಗಳಲ್ಲೇ ನೋಡಲು ಬಯಸುತ್ತಿರಬಹುದು. ಈ ಕಾರಣಕ್ಕೆ ‘ಗಾರ್ಗಿ’ ಇಷ್ಟ ಪಟ್ಟಿಲ್ಲ ಎನ್ನಲಾಗುತ್ತಿದೆ. ಈ ಮಧ್ಯೆ ಮೌತ್ ಪಬ್ಲಿಸಿಟಿಯಿಂದ ಚಿತ್ರಮಂದಿರಕ್ಕೆ ಜನ ಬಂದರೆ, ಸಿನಿಮಾ ಗೆಲ್ಲೋದು ಖಚಿತ.