Recent Posts

Monday, January 20, 2025
ಕ್ರೈಮ್ಬೆಂಗಳೂರುಸುದ್ದಿ

ಪೋರ್ನ್ ವಿಡಿಯೋ ತೋರಿಸಿ ದೈಹಿಕ ಹಿಂಸೆ ಹಾಗೂ ಸಿಗರೇಟ್​ನಿಂದ ಸುಟ್ಟು ಚಿತ್ರಹಿಂಸೆ ನೀಡುತ್ತಿದ್ದ ಕಾಮುಕ ಪತಿಯಿಂದ ಪತ್ನಿಗೆ ವಿಕೃತವಾಗಿ ಹಿಂಸೆ..! ಚಿತ್ರಹಿಂಸೆ ನೀಡುತ್ತಿದ್ದ ಸ್ಯಾಡಿಸ್ಟ್ ಪತಿ ಅರೆಸ್ಟ್​..! – ಕಹಳೆ ನ್ಯೂಸ್

ಬೆಂಗಳೂರು : ಕಾಮುಕ ಪತಿಯೊಬ್ಬ ಪತ್ನಿಗೆ ವಿಕೃತವಾಗಿ ಹಿಂಸೆ ನೀಡುತ್ತಿದ್ದನು. ಚಿತ್ರಹಿಂಸೆ ನೀಡುತ್ತಿದ್ದ ಸ್ಯಾಡಿಸ್ಟ್ ಪತಿಯನ್ನ ಅರೆಸ್ಟ್​ ಮಾಡಲಾಗಿದೆ.

ಪತಿ ಪ್ರದೀಪ್ ಪತ್ನಿಗೆ ಪೋರ್ನ್ ವಿಡಿಯೋ ತೋರಿಸಿ ದೈಹಿಕ ಹಿಂಸೆ ಹಾಗೂ ಸಿಗರೇಟ್​ನಿಂದ ಸುಟ್ಟು ಚಿತ್ರಹಿಂಸೆ ನೀಡುತ್ತಿದ್ದನು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಶ್ಲೀಲ ಚಿತ್ರ ತೋರಿಸಿ ಪತ್ನಿಗೆ ಮದ್ಯ ಕುಡಿಸುತ್ತಿದ್ದ. ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಮದುವೆ ಯಾದ ಐದು ತಿಂಗಳಿಗೆ ಪತಿಯ ಅಸಲಿ ಚಹರೆ ಬೆಳಕಿಗೆ ಬಂದಿದೆ. ಐದು ಬಾರಿ ಅಬಾರ್ಷನ್ ಮಾಡಿಸಿದ್ದ ಆರೋಪವಿದೆ.

ಪತ್ನಿ ಕಾಡಿ ಬೇಡಿ‌ ಎರಡು ಮಕ್ಕಳನ್ನು ಉಳಿಸಿಕೊಂಡಿದ್ದಳು. ಮನೆಗೆ ಸ್ನೇಹಿತರ ಕರೆಸಿ ಪಾರ್ಟಿ ಮಾಡಿ ಅವರ ಮುಂದೆ ಹಿಂಸೆ ಕೊಡುತ್ತಿದ್ದ. ಪ್ರಶ್ನಿಸಿದರೆ ಹಲ್ಲೆ ಮಾಡಿ ಡಿವೋರ್ಸ್ ನೀಡುವಂತೆ ಒತ್ತಾಯ ಮಾಡುತ್ತಿದ್ದ. ತವರು ಸೇರಿಕೊಂಡರೂ ಪತಿ ಕಾಟ ಕೊಡ್ತಿದ್ದಾನೆ ಅಂತಾ ದೂರು ನೀಡಿದ್ದಾರೆ. ಈ ಪ್ರಕರಣ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.