Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ನೇತ್ರಾವತಿ ವಲಯ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯ ಶ್ರೀರಾಮ ಮಂದಿರ ಕಲ್ಲಡ್ಕ ಶಾಖೆ ಹಾಗೂ ನೇತಾಜಿ ಕಲ್ಲಡ್ಕ ಶಾಖೆಯ ಜಂಟಿ ಆಶ್ರಯದಲ್ಲಿ ಮಾತೃಧ್ಯಾನ, ಮಾತೃಪೂಜನ, ಮಾತೃವಂದನಾ, ಮಾತೃಭೋಜನ ಕಾರ್ಯಕ್ರಮ – ಕಹಳೆ ನ್ಯೂಸ್

ಕಲ್ಲಡ್ಕ: ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ನೇತ್ರಾವತಿ ವಲಯ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯ ಶ್ರೀರಾಮ ಮಂದಿರ ಕಲ್ಲಡ್ಕ ಶಾಖೆ ಹಾಗೂ ನೇತಾಜಿ ಕಲ್ಲಡ್ಕ ಶಾಖೆಯ ಜಂಟಿ ಆಶ್ರಯದಲ್ಲಿ ಮಾತೃಧ್ಯಾನ, ಮಾತೃಪೂಜನ, ಮಾತೃವಂದನಾ, ಮಾತೃಭೋಜನ ಕಾರ್ಯಕ್ರಮವು ಕಲ್ಲಡ್ಕ ಶ್ರೀ ರಾಮ ಮಂದಿರದ ಮಾಧವ ಸಭಾಭವನದಲ್ಲಿ ಬಹಳ ಸಂಭ್ರಮಯುತವಾಗಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪ್ರಯುಕ್ತ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಲಡ್ಕ ಶಾಖೆಯ ಪ್ರಮುಖ ಶಿಕ್ಷಕರಾದ ಶ್ರಿ ದಿನೇಶ್ ರಾಮನಗರ ಇವರು ವಹಿಸಿದ್ದರು. ಇಂದಿನ ಕಾರ್ಯಕ್ರಮವಾದ ಮಾತೃಭೋಜನದ ಮಹತ್ವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಂಸ್ಕಾರ ಪ್ರಮುಖರು ಶ್ರೀ ಲಕ್ಷ್ಮೀ ನಾರಾಯಣರವರು ಇಡೀ ದೇಶದ ಪರಂಪರೆಯಲ್ಲಿ ಮಾತೃಶಕ್ತಿ, ಮಾತೃಪ್ರೇಮಕ್ಕೆ ಇರುವಷ್ಟು ಪ್ರಭಾವ ಬೇರೆ ಯಾವುದಕ್ಕೂ ಇಲ್ಲ. ಅದು ದೇಶ, ಸಮಾಜ, ಕುಟುಂಬವನ್ನು ಸುಧೃಡಗೊಳಿಸುವ ದೈವಿಕ ಶಕ್ತಿಯನ್ನು ಹೊಂದಿದೆ. ತಾಯಿಯಾದವಳು ಎಂತಹ ಭಯಾನಕನೋವನ್ನು ಸಹಿಸುವ, ಕಠಿಣ ಸಮಸ್ಯೆಗಳನ್ನು ನಿವಾರಿಸುವ ಶಕ್ತಿಯಿರವುದು ಮಾತೃ ಪ್ರೀತಿಗೆ ಮಾತ್ರ. ಅವಳು ತನ್ನ ಮಕ್ಕಳಿಗೋಸ್ಕರ, ಪರಿವಾರಕ್ಕೋಸ್ಕರ ಯಾವ ತ್ಯಾಗಕ್ಕೂ ಸಿದ್ದಳಿರುತ್ತಾಳೆ. ಅದು ಈ ದೇಶದ ಮಣ್ಣಿನ ಗುಣ ಅದು. ಆದರೆ ಇತ್ತೀಚಿನ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ, ಮಕ್ಕಳು ತನ್ನ ಕಾಲ ಮೇಲೆ ನಿಂತ ಮೇಲೆ ತಂದೆ ತಾಯಿಗಳನ್ನು ನೋಡುವ ರೀತಿ ನಿಜವಾಗಿಯೂ ನೋವು ಭರಿಸುವಂತಾಹದು. ತಾಯಿ ಋಣವನ್ನು ತೀರಿಸಲು ಈ ಜನ್ಮದಲ್ಲಿ ಸಾಧ್ಯವಿಲ್ಲದಿದ್ದರೂ. ಅವಳನ್ನು ಮಾತ್ರ ಎಂದಿಗೂ ಕಡೆಗಣಿಸಬೇಡಿ ಕೇವಲ ಸಾಂತ್ವನದ ಹಾಗೂ ನಿಷ್ಕಲ್ಮಶ ಪ್ರೀತಿಯ ಎರಡು ಮಾತಿಗಾಗಿ ತಡಬಡಿಸುವ ಆ ಬಡ ಜೀವಕ್ಕೆ ಆ ಮಟ್ಟಿನ ಸ್ವಲ್ಪ ಋಣ ಸಂದಾಯ ಮಾಡುವ ಪ್ರಯತ್ನ ಆಗಲಿ ಎಂದರು.

ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಷ್ಟ್ರ ಸೇವಿಕಾ ಸಮಿತಿಯ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಡಾ. ಕಮಲ ಪ್ರಭಾಕರ್ ಭಟ್ ಕಲ್ಲಡ್ಕ ಇವರು ಮಾತನಾಡಿ. ಭಾರತ ಮಾತೆ ಮತ್ತು ತಾಯಿ ಎರಡೂ ಒಂದೆ. ಎರಡನ್ನೂ ನಾವೆಲ್ಲರೂ ಪೂಜಿಸ ಬೇಕಾದುದು ಧರ್ಮ, ಈ ಮಣ್ಣಿನ ಋಣ ಆ ತಾಯಿಯ ಋಣವನ್ನು ಯಾವತ್ತೂ ಮರೆಯಬಾರದು. ಈಗಿನ ಪರಿಸ್ಥಿತಿ ಹೇಗಿದೆ ಅಂದರೆ ಇಂಥಹ ಮಕ್ಕಳು ಆ ತಾಯಿಗೆ ಹುಟ್ಟಬಾರದಿತ್ತು ಎನ್ನುವ ಬಾವನೆ ವ್ಯಾಪಕವಾಗಿ ಇದೆ. ಈಗಿನ ಯುವತಿಯರು ಇದರ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ್ದು ಸಾತ್ವಿಕ ಮನಸ್ಸಿನಿಂದ ಸಂಸ್ಕಾರದ ನೆರಳಿನಲ್ಲಿ ಮಕ್ಕಳನ್ನು ಬೆಳೆಸುವುದು ಬಹಳ ಅಗತ್ಯ ಎಂದರು. ಜಿಲ್ಲಾ ಸಂಚಾಲಕರಾದ ಶ್ರೀ ಜಯರಾಮ್ ಹಾಗೂ ಎಲ್ಲಾ ಹಿರಿಯ ಪ್ರಮುಖರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೊನೆಯಲ್ಲಿ ಮಾತೃಧ್ಯಾನ, ಮಾತೃಪೂಜನ, ಮಾತೃವಂದನಾ ಮತ್ತು ಮಾತೃ ಭೋಜನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಒಟ್ಟು 350 ಯೋಗ ಹಾಗೂ ಯೋಗೇತರ ಬಂಧುಗಳು ಸೇರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಮುಖ್ಯ ಶಿಕ್ಷಕರಾದ ಮನೋಜ್ ಉಳ್ಳಾಲ ಎಲ್ಲಾ ಯೋಗ ಬಂಧುಗಳ ಜೊತೆಯಲ್ಲಿ ದೀಪ ಬೆಳಗಿಸಿದರು, ನಾಗೇಶ ಕಲ್ಲಡ್ಕ ಅವರ ನೇತೃತ್ವದಲ್ಲಿ ಭಜನೆ ನಡೆಯಿತು. ಆನಂತರ ಎಲ್ಲಾ ಪ್ರಮುಖ ಯೋಗ ಶಿಕ್ಷಕರ ನೇತೃತ್ವದಲ್ಲಿ ಆಟೋಟಗಳು ಬಹಳ ಮನರಂಜನೆಯುತವಾಗಿ ನಡೆಯಿತು. ಆಮೇಲೆ ನಗುವೆ ಯೋಗ ಎಂಬ ಕಾರ್ಯಕ್ರಮವನ್ನು ಜಿಲ್ಲಾ ಸಂಸ್ಕಾರ ಪ್ರಮುಖರು ಶ್ರೀ ಲಕ್ಷ್ಮೀ ನಾರಾಯಣರವರು ನಗುವಿನ ಲೋಕದಲ್ಲಿ ಎಲ್ಲರನ್ನೂ ತೇಲಾಡಿಸಿದರು.
ಕಾರ್ಯಕ್ರಮ ನಿರೂಪಣೆಯನ್ನು ಕುಮಾರಿ ಶ್ವೇತ ಕೆ, ಸ್ವಾಗತವನ್ನು ಶ್ರೀಮತಿ ಹರ್ಷಿತ, ವರದಿ ವಾಚನವನ್ನು ಶ್ರೀಮತಿ ಶ್ವೇತ ಶೆಟ್ಟಿ, ವಂದನಾರ್ಪಣೆಯನ್ನು ಶ್ರೀಮತಿ ಅನಿತ ನಡೆಸಿಕೊಟ್ಟರು.