Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ನಿದ್ದೆಯ ಮಂಪರಿನಲ್ಲಿ ನಿಯಂತ್ರಣ ತಪ್ಪಿ ಹೊಂಡಕ್ಕೆ ಉರುಳಿ ಬಿದ್ದ ಕಾರು: ಪವಾಡಸದೃಶವಾಗಿ ಪಾರಾದ ಚಾಲಕ – ಕಹಳೆ ನ್ಯೂಸ್

ಬಂಟ್ವಾಳ: ನಿದ್ದೆಯ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆಯ ಬದಿಯ ಹೊಂಡಕ್ಕೆ ಉರುಳಿ ಬಿದ್ದ ಘಟನೆ ಪಾಣೆಮಂಗಳೂರು ಎಂಬಲ್ಲಿ ನಡೆದಿದ್ದು, ಚಾಲಕ ಯಾವುದೇ ಗಾಯವಿಲ್ಲದೆ ಪವಾಡಸದೃಶವಾಗಿ ಪಾರಾಗಿದ್ದಾನೆ.

ನರಿಕೊಂಬು ನಿವಾಸಿ ಕುಶಾಂತ್ ಅವರು ಪವಾಡಸದೃಶವಾಗಿ ಪಾರಾದ ವ್ಯಕ್ತಿ. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಯ ಪಾಣೆಮಂಗಳೂರು ಎಂಬಲ್ಲಿ ಈ ಘಟನೆ ನಡೆದಿದ್ದು, ರಸ್ತೆ ಕೆಳಗೆ ಸುಮಾರು 30 ಅಡಿ ಅಳಕ್ಕೆ ಕಾರು ಉರುಳಿ ಬಿದ್ದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕುಶಾಂತ್ ಅವರು ಜನರೇಟರ್ ಮ್ಯಾಕಾನಿಕ್ ಕೆಲಸಗಾರನಾಗಿದ್ದು, ಉಡುಪಿಯಲ್ಲಿ ಜನರೇಟರ್ ರಿಪೇರಿ ಮುಗಿಸಿ ಬರುತ್ತಿದ್ದ ವೇಳೆ ಘಟನೆ ನಡದಿದೆ.
ಉಡುಪಿಯಿಂದ ಬರುವ ವೇಳೆ ಮಂಗಳೂರಿನಲ್ಲಿ ಇಬ್ಬರು ಕೆಲಸಗಾರರನ್ನು ಮನೆಗೆ ಡ್ರಾಪ್ ಮಾಡಿ ಅ ಬಳಿಕ ಕುಶಾಂತ್ ಒಬ್ಬನೇ ಕಾರಿನಲ್ಲಿ ಬರುತ್ತಿದ್ದರು.
ಮುಂಜಾವಿನ ವೇಳೆ ಸುಮಾರು 2.50 ರ ವೇಳೆ ನಿದ್ದೆಯ ಮಂಪರಿನಲ್ಲಿ ಕಾರು ನಿಯಂತ್ರಣ ತಪ್ಪಿ ಕೆಳಗೆ ಬಿದಿದ್ದು, ಇಂದು ಬೆಳಿಗ್ಗೆ ಕಾರನ್ನು ವಿಜಯಲಕ್ಷ್ಮಿ ಅವರ ಕ್ರೇನ್ ಬಳಸಿ ಕಾರನ್ನು ಮೇಲಕ್ಕೆತ್ತಲಾಗಿದೆ.

 

ಘಟನೆಯ ಬಳಿಕ ದೃಶ್ಯವನ್ನು ನೋಡುವ ತವಕದಿಂದ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆಯಾಗದಂತೆ ಮೆಲ್ಕಾರ್ ಟ್ರಾಫಿಕ್ ಎಸ್.ಐ.ಮೂರ್ತಿ, ಎ.ಎಸ್.ಐ.ಸುರೇಶ್ ಪಡಾರ್ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿದ್ದು ಸಮಸ್ಯೆ ಬಗೆಹರಿಸಿದರು.