ಅಡಿಕೆ ಬೇಡಿಕೆ ಹೆಚ್ಚಳ, ಬೆಲೆಯಲ್ಲಿ ಏರಿಕೆ ; ಹೊಸ ಅಡಿಕೆ ಕೆ.ಜಿಗೆ 450 ರೂ., ಹಳೆಯದಕ್ಕೆ 565ರೂ – ಕಹಳೆ ನ್ಯೂಸ್
ಪುತ್ತೂರು, ಜು 20 : ಈ ವಾರ ಹೊಸ ಅಡಿಕೆ ಬೆಲೆಯಲ್ಲಿ ಏರಿಕೆಯ ಬೆಳವಣಿಗೆಯಾಗಿದೆ. ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಕೆ.ಜಿಗೆ 450 ರೂ. ಸನಿಹ ತಲುಪಿದೆ.
ಸಹಕಾರಿ ಸಂಸ್ಥೆ ಕ್ಯಾಂಪ್ಕೋಗೆ ಹೋಲಿಸಿದರೆ ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಕೆ.ಜಿಗೆ 7 ರೂ. ಹಳೆ ಅಡಿಕೆ 10 ರೂ. ಗಳಷ್ಟು ಅಧಿಕ ಇದ್ದು ಬೆಳೆಗಾರರು ಹೊರ ಮಾರುಕಟ್ಟೆಯತ್ತ ದೄಷ್ಟಿ ಹರಿಸಿದ್ದಾರೆ, ಪುತ್ತೂರಿನಲ್ಲಿ ಹೊರ ಮಾರುಕಟ್ಟೆಯಲ್ಲಿ ಜು. 19 ರಂದು ಹಳೆಯದಕ್ಕೆ 565ರೂ. ಹಾಗೂ ಹೊಸ ಅಡಿಕೆಗೆ 447 ರೂ. ಇತ್ತು.
ಧಾರಣೆ ಏರಿದರೂ ಬೇಡಿಕೆಗೆ ತಕ್ಕಷ್ಟು ಅಡಿಕೆ ಮಾರುಕಟ್ಟೆಗೆ ಬರುತ್ತಿಲ್ಲ. ಅಸ್ಸಾಂ, ಮೇಘಾಲಯ ಸೇರಿದಂತೆ ಉತ್ತರ ಭಾರತದಲ್ಲಿ ಭಾರೀ ಮಳೆಯ ಕಾರಣ ಅಡಿಕೆ ವಹಿವಾಟು ಕುಸಿದಿದ್ದು, ಮಾರುಕಟ್ಟೆಯ ಬಹುಪಾಲು ದಕ್ಷಿಣ ಭಾರತವನ್ನು ಅವಲಂಭಿಸಿರುವುದು ಕೂಡಾ ಬೇಡಿಕೆ ಹೆಚ್ಚಳಕ್ಕೆ ಕಾರಣವಾಗಿದೆ.