Wednesday, January 22, 2025
ಅಂತಾರಾಷ್ಟ್ರೀಯಸುದ್ದಿ

ಆರ್ಥಿಕ ಬಿಕ್ಕಟ್ಟು – ಒಂದೊತ್ತಿನ ಊಟಕ್ಕಾಗಿ ವೇಶ್ಯಾವಾಟಿಕೆ ಹಾದಿ ಹಿಡಿಯುತ್ತಿರುವ ಲಂಕಾ ಮಹಿಳೆಯರು – ಕಹಳೆ ನ್ಯೂಸ್

ಕೊಲಂಬೊ: ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟು ವಿಷಮಸ್ಥಿತಿ ತಲುಪುತ್ತಿದೆ. ಸುಮಾರು 60 ಲಕ್ಷ ಜನರು ಆಹಾರದ ಕೊರತೆ ಎದುರಿಸುತ್ತಿದ್ದಾರೆ. ಈ ನಡುವೆ ಅಗತ್ಯ ಔಷಧಗಳು ಹಾಗೂ ಎರಡು ಹೊತ್ತಿನ ಊಟಕ್ಕಾಗಿ ವೇಶ್ಯಾವಾಟಿಕೆಯ ಹಾದಿ ಹಿಡಿಯುತ್ತಿದ್ದಾರೆ ಎಂದು ವರದಿಯಾಗಿದೆ.

ಅಂಕಿ-ಅಂಶಗಳ ವರದಿಯ ಪ್ರಕಾರ ಜನರು ಈಗ ಆಹಾರ ಉಳಿಸಲು ದಿನಕ್ಕೆ ಒಮ್ಮೆ ಮಾತ್ರ ಊಟ ಮಾಡುತ್ತಿದ್ದಾರೆ. ಶೇ.25 ರಷ್ಟು ಜನರು ತೀವ್ರ ತೊಂದರೆಯಲ್ಲಿದ್ದು ವೇಶ್ಯಾವಾಟಿಕೆಯಲ್ಲಿ ತೊಡಗಿರುವವರು ಹೆಚ್ಚಾಗುವುದರೊಂದಿಗೆ ಮಹಿಳೆಯರನ್ನು ಬಲವಂತದಿಂದಲೂ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ಹಣಕ್ಕಾಗಿ ಮಹಿಳೆಯರು ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಮಾಡುತ್ತಿದೆ. ಆಯುರ್ವೇದ ಮತ್ತು ಸ್ಪಾ ಕೇಂದ್ರಗಳು ಈಗ ವೇಶ್ಯಾವಾಟಿಕೆಗೆ ಬಳಕೆಯಾಗುತ್ತಿವೆ. ಮಹಿಳೆಯರು ಈ ವ್ಯವಹಾರದಲ್ಲಿ ವೇಗವಾಗಿ ಸೇರಿಕೊಳ್ಳುತ್ತಿದ್ದಾರೆ. ಈ ಮೂಲಕ ಅವರು ಕೊಂಚ ಹಣ ಸಂಪಾದಿಸಲು ಸಾಧ್ಯವಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸ್ಪಾ-ಕೇಂದ್ರಗಳಲ್ಲಿ ಕರ್ಟನ್‌ಗಳನ್ನು ನೇತುಹಾಕುವ ಮೂಲಕ ಲೈಂಗಿಕ ಕ್ರಿಯೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜವಳಿ ಉದ್ಯಮದಲ್ಲಿ ತೊಡಗಿರುವ ಮಹಿಳೆಯರು ಅತ್ಯಂತ ವೇಗವಾಗಿ ಈ ವ್ಯವಹಾರಕ್ಕೆ ಸೇರುತ್ತಿದ್ದಾರೆ. ಈ ವರ್ಷದ ಅಂತ್ಯದ ವೇಳೆಗೆ, ಈ ದೇಶದಲ್ಲಿ ಈ ಪರಿಸ್ಥಿತಿ ಸಂಪೂರ್ಣವಾಗಿ ಹರಡುತ್ತದೆ ಎಂದು ಇಲ್ಲಿನ ತಜ್ಞರು ಹೇಳುತ್ತಿದ್ದಾರೆ. ಜವಳಿ ಉದ್ಯಮ ಮುಚ್ಚುವ ಭೀತಿಯೂ ಎದುರಾಗಿದ್ದು, ಮಹಿಳೆಯರು ಜೀವನ ನಿರ್ವಹಣೆಗಾಗಿ ಪರ್ಯಾಯ ಮಾರ್ಗಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಕೆಲವರು ವೇಶ್ಯಾವಾಟಿಕೆಯನ್ನೇ ವೃತ್ತಿಯಾಗಿ ಮಾಡಿಕೊಳ್ಳುತ್ತಿದ್ದಾರೆ.

ಈ ಕುರಿತು ಲೈಂಗಿಕ ಕಾರ್ಯಕರ್ತರೊಬ್ಬರು ಮಾತನಾಡಿ, ದೇಶದ ಆರ್ಥಿಕತೆ ಹದಗೆಟ್ಟಿರುವುದು ಮಹಿಳೆಯರನ್ನು ಈ ಉದ್ಯಮಕ್ಕೆ ಬರುವಂತೆ ಮಾಡಿದೆ. ಈ ಸಮಯದಲ್ಲಿ ನಾವು ನೋಡಬಹುದಾದ ಉತ್ತಮ ಪರಿಹಾರವೆಂದರೆ ಲೈಂಗಿಕ ಕೆಲಸ ಎಂದು ನಾವು ನಂಬಿದ್ದೇವೆ. ನಮ್ಮ ತಿಂಗಳ ಸಂಬಳ ಸುಮಾರು 28,000 ರೂ. ಮತ್ತು ನಾವು ಓವರ್‌ಟೈಮ್ ಮೂಲಕ 35 ಸಾವಿರದವರೆಗೆ ಗಳಿಸಬಹುದು. ಲೈಂಗಿಕ ಕೆಲಸದಲ್ಲಿ ತೊಡಗಿಸಿಕೊಳ್ಳುವುದರಿಂದ ನಾವು ಇದಕ್ಕಿಂತ ಹೆಚ್ಚಿನದನ್ನು ಗಳಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.