ಪುತ್ತೂರು: ಗಾಂಜಾ ಮಾರಾಟ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಯುವಕರನ್ನು ಬೆಳ್ಳಾರೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬೇಲೂರು ತಾಲ್ಲೂಕು ಹಳೇಬೀಡು ಕೆರೆಕ್ಕೋಡಿ ಸಂತೆ ಮೈದಾನ ಬಳಿಯ ನಿವಾಸಿ ಸಾಧಿಕ್ (35), ಸುಳ್ಯ ಐವತ್ತೊಕ್ಲು ಜನತಾ ಕಾಲೋನಿ ನಿವಾಸಿ ಮಹಮ್ಮದ್ ಇಕ್ಬಾಲ್ ಅಲಿಯಾಸ್ ಇಕ್ಕು (25), ಸುಳ್ಯ ಕಳಂಜ ಗ್ರಾಮದ ವಿಷ್ಣು ನಗರ ನಿವಾಸಿ ಮಹಮ್ಮದ್ ನೌಸಾದ್ ಅಲಿಯಾಸ್ ನೌಸು ಬಂಧಿತ ಆರೋಪಿಗಳು. ಇವರ ಬಳಿಯಿಂದ 20000 ರೂ. ಬೆಲೆಬಾಳುವ 950 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರು ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಳಂಜ ಗ್ರಾಮದ ವಿಷ್ಣು ನಗರ ಸಾರ್ವಜನಿಕ ಬಸ್ ನಿಲ್ದಾಣದ ಬಳಿ ಗಾಂಜಾವನ್ನು ಮಾರಾಟ ಮಾಡುತ್ತಿರುವುದಾಗಿ ಬಂದ ಮಾಹಿತಿಯಂತೆ ಬೆಳ್ಳಾರೆ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ ಯುವಕರನ್ನು ಹಿಡಿದು ವಿಚಾರಿಸಿದಾಗ ಗಾಂಜಾ ಮಾರಾಟ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.