Wednesday, January 22, 2025
ದಕ್ಷಿಣ ಕನ್ನಡಸುದ್ದಿ

ಸಂತ ಫಿಲೋಮಿನಾ ಕಾಲೇಜಿನಲ್ಲಿ 2019-21 ರ ಸಾಲಿನಲ್ಲಿ ನಡೆದ ಪದವಿ ಮತ್ತು ಸ್ನಾತಕೋತ್ತರ ವಿಭಾಗಗಳಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ – ಕಹಳೆ ನ್ಯೂಸ್

ಮಂಗಳೂರು : ಸಂತ ಫಿಲೋಮಿನಾ ಕಾಲೇಜಿನಲ್ಲಿ 2019-21 ರ ಸಾಲಿನಲ್ಲಿ ಮಂಗಳೂರು ವಿವಿ ನಡೆಸಿದ ಪದವಿ ಮತ್ತು ಸ್ನಾತಕೋತ್ತರ ವಿಭಾಗಗಳಲ್ಲಿ ರ‍್ಯಾಂಕ್ ಪಡೆದ ಇಪ್ಪತ್ತೊಂಬತ್ತು ವಿದ್ಯಾರ್ಥಿಗಳನ್ನು ಕಾಲೇಜಿನಲ್ಲಿ ಏರ್ಪಡಿಸಲಾದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪುತ್ತೂರು ನಗರಸಭೆಯ ಪೌರಾಯುಕ್ತರಾದ ಮಧು ಎಸ್ ಮನೋಹರ್, ಕಾಲೇಜಿನ ಸಂಚಾಲಕರಾದ ರೆ| ಫಾ| ಲಾರೆನ್ಸ್ ಮಸ್ಕರೇನ್ಹಸ್, ಪ್ರಾಂಶುಪಾಲರಾದ ರೆ| ಡಾ | ಎಂಟೊನಿ ಪ್ರಕಾಶ್ ಮಂತೆರೋ, ಕ್ಯಾಂಪಸ್ ನಿರ್ದೇಶಕ ರೆ| ಫಾ| ಸ್ಟಾ÷್ಯನಿ ಪಿಂಟೋ, ಉಪಪ್ರಾಂಶುಪಾಲರಾದ ಪ್ರೊ.ಉದಯ ಕಾನ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ.ಎ.ಜೆ.ರೈ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ.ಡಿ ಅಮ್ಮಣ್ಣ ರೈ, ಮಾಯಿದೆ ದೇವುಸ್ ಚರ್ಚ ಪಾಲನಾ ಸಮಿತಿಯ ಉಪಾಧ್ಯಕ್ಷ ಶ್ರೀ.ಮೌರಿಸ್ ಮಸ್ಕರೇನ್ಹಸ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಡಾ| ಚಂದ್ರಶೇಖರ್ ಮತ್ತು ಪ್ರೊ. ಭಾರತೀ ರೈ, ವಿದ್ಯಾರ್ಥಿ ಸಂಘದ ನಾಯಕ ಅಮಿತ್ ಅರನ್ಹಾ, ಕಾರ್ಯದರ್ಶಿ ಪ್ರಖ್ಯಾತ್ ಟಿಜೆ, ಮತ್ತು ಜತೆ ಕಾರ್ಯದರ್ಶಿ ಮಹಾಲಸಾ ಪೈ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು