Tuesday, January 21, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು : ತುಂಡಾಗಿ ಬಿದ್ದ ಬಸ್ ನಿಲ್ದಾಣದ ಬಳಿಯ ಫುಟ್ ಪಾತ್ ಸ್ಲಾಬ್ ; ಅಪಾಯ ತಿಳಿದು ತಕ್ಷಣವೇ ಸ್ಪಂದಿಸಿದ ನಗರಸಭೆ ; ವ್ಯಾಪಕ ಪ್ರಶಂಸೆ- ಕಹಳೆ ನ್ಯೂಸ್

ಪುತ್ತೂರು: ಬಸ್ ನಿಲ್ದಾಣದ ಬಳಿಯ ಪಾದಾಚಾರಿ ಕಾಲು ದಾರಿಯ (ಫುಟ್ ಪಾತ್) ಸ್ಲಾಬ್ ತುಂಡಾಗಿ ಸಾರ್ವಜನಿಕರಿಗೆ ಅಪಾಯವಾದ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಪಂದಿಸಿ ದುರಸ್ಥಿ ಕಾಮಗಾರಿ ನಡೆಸುತ್ತಿರುವ, ನಗರ ಸಭೆ ಹಾಗೂ ನಗರಸಭಾ ಸಭಾ ಸದಸ್ಯರ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಪುತ್ತೂರು ಬಸ್ ನಿಲ್ದಾಣದ ಸೂಪರ್ ಟವರ್ ಬಳಿ ಪಾದಾಚಾರಿ ಕಾಲುದಾರಿಯ ಸ್ಲಾಬ್ ತುಂಡಾಗಿ ಸಾರ್ವಜನಿಕ ಅಪಾಯಕಾರಿ ಆಗಿದ್ದು, ಈ ಸ್ಥಳದಲ್ಲಿ ಓರ್ವರು ಬಿದ್ದು ಗಾಯವಾದ ಮಾಹಿತಿಯನ್ನು ಸ್ಥಳೀಯ ಹೋಟೆಲ್‌ ಮಾಲಕರಾದ ದಿನೇಶ್ ಕಾಮತ್, ಸ್ಥಳೀಯ ಕಾರ್ಯಕರ್ತ ದಾಮೋದರ್ ಭಂಡಾರ್ಕರ್ ರವರ ಮೂಲಕ ನಗರಸಭೆ ವಾರ್ಡ್ ಸದಸ್ಯರಾದ ಶಕ್ತಿ ಸಿನ್ಹಾರಿಗೆ ತಿಳಿಸಿದ್ದು, ಕೂಡಲೇ ಸ್ಪಂದಿಸಿದ ಅವರು ನಗರಸಭೆ ಕಾರ್ಮಿಕರಿಗೆ ಸೂಚನೆ ನೀಡಿ ದುರಸ್ಥಿ ಕಾಮಗಾರಿ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾರ್ವಜನಿಕರ ಸಂಕಷ್ಟಕ್ಕೆ ಶೀಘ್ರ ಸ್ಪಂದಿಸಿದ ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ದಾಮೋದರ್ ಭಂಡಾರ್ಕರ್, ನಗರಸಭೆ ವಾರ್ಡ್ ಸದಸ್ಯರಾದ ಶಕ್ತಿ ಸಿನ್ಹಾ ಹಾಗೂ ನಗರಸಭೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ..

ಜಾಹೀರಾತು
ಜಾಹೀರಾತು
ಜಾಹೀರಾತು