Tuesday, January 21, 2025
ದಕ್ಷಿಣ ಕನ್ನಡಸುದ್ದಿ

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಸಂಘದ ವತಿಯಿಂದ “ವಿದ್ಯಾರ್ಥಿಗಳ ಚಿತ್ತ ವೃಕ್ಷಗಳತ್ತ” ಕಾರ್ಯಕ್ರಮ – ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಸಂಘದ ವತಿಯಿಂದ “ವಿದ್ಯಾರ್ಥಿಗಳ ಚಿತ್ತ ವೃಕ್ಷಗಳತ್ತ” ಎಂಬ ಕಾರ್ಯಕ್ರಮವನ್ನು ಬಂಟ್ವಾಳ ಅರಣ್ಯ ಇಲಾಖೆಯ ಸಹಕಾರದೊಂದಿಗೆ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ರಕ್ತಚಂದನ, ಸಾಗುವಾನಿ, ಮಹಾಗನಿ, ರಾಮಪತ್ರೆ, ಹೆಬ್ಬಲಸು, ಸೀತಾಫಲ, ಪೇರಳೆ, ಬೇವು, ಬಿಲ್ವ, ನೆಲ್ಲಿ ಮುಂತಾದ ಗಿಡಗಳನ್ನು ವಿತರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮವನ್ನು ವಿಜ್ಞಾನ ಸಂಘದ ಸಂಯೋಜಕರಾದ ಜ್ಯೋತಿಶ್ರೀ ಸಿ.ಎಂ ಹಾಗೂ ರಮ್ಯ. ಜೆ ನಿರ್ವಹಿಸಿದರು. ಅಧ್ಯಾಪಕರಾದ ಬಾಲಕೃಷ್ಣ ಹಾಗೂ ಸುಮಂತ್ ಆಳ್ವ ಸಹಕರಿಸಿದರು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು