Tuesday, January 21, 2025
ಸುದ್ದಿ

‘ಹೂ ಅಂಟಾವಾ ಮಾವ..’ ಸಾಂಗ್ ಗೆ ಸಖತ್ ಆಗಿ ಸ್ಟೆಪ್ ಹಾಕಿದ ಸಮಂತಾ – ಅಕ್ಷಯ್ ಕುಮಾರ್ – ಕಹಳೆ ನ್ಯೂಸ್

ಇತ್ತೀಚೆಗೆ ಸಖತ್ ಸುದ್ದಿಯಲ್ಲಿರುವ ನಟಿ ಸಮಂತಾ ಅವರು ಹೆಜ್ಜೆ ಹಾಕಿದ ‘ಪುಷ್ಪ’ ಚಿತ್ರದ ‘ಹೂ ಅಂಟಾವಾ ಮಾವ..’ ಸಾಂಗ್ ಸೂಪರ್ ಹಿಟ್ ಆಗಿತ್ತು. ಸಮಂತಾ ಅವರ ಬೋಲ್ಡ್ ಲುಕ್ ನೋಡಿ ಸಾಕಷ್ಟು ಮಂದಿ ಫಿದಾ ಆಗಿದ್ದರು. ಈ ಹಾಡು ಸೂಪರ್ ಹಿಟ್ ಆಗಲು ದೇವಿಶ್ರೀ ಪ್ರಸಾದ್ ಅವರ ಸಂಗೀತ ಸಂಯೋಜನೆಯ ಕೊಡುಗೆ ಕೂಡ ದೊಡ್ಡದಿದೆ.

ಟಾಲಿವುಡ್‍ನಿಂದ ಹಿಡಿದು ಬಾಲಿವುಡ್‍ವರೆಗೆ ಅನೇಕರಿಗೆ ಈ ಹಾಡು ಇಷ್ಟ. ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಕೂಡ ಈ ಸಾಂಗ್‍ಗೆ ಹೆಜ್ಜೆ ಹಾಕಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗ ಸಮಂತಾ ಹಾಗೂ ಅಕ್ಷಯ್ ಕುಮಾರ್ ‘ ಹೂ ಅಂಟಾವಾ ಮಾವ..’ ಎಂದು ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ‘ಕಾಫಿ ವಿತ್ ಕರಣ್ ಸೀಸನ್ 7’ರ ಮೂರನೇ ಎಪಿಸೋಡ್‍ಗೆ ಅತಿಥಿಯಾಗಿ ಬಂದಿರುವ ಸಮಂತಾ ಹಾಗೂ ಅಕ್ಷಯ್ ಕುಮಾರ್ ಈವರೆಗೆ ಒಟ್ಟಾಗಿ ನಟಿಸಿಲ್ಲ. ಆದರೆ, ಇವರು ಇದೇ ಮೊದಲ ಬಾರಿಗೆ ಚಾಟ್ ಶೋಗಾಗಿ ಒಂದಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಲಿವುಡ್‍ನಲ್ಲೂ ಹೆಸರು ಮಾಡಿರುವ ಸಮಂತಾ ಅವರಿಗೆ ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸೀರಿಸ್ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತು. ಹಿಂದಿಯಿಂದ ಅವರಿಗೆ ಸಾಕಷ್ಟು ಆಫರ್ ಗಳು ಬರುತ್ತಿದ್ದು, ಈ ಕಾರಣಕ್ಕಾಗಿಯೇ ‘ಕಾಫಿ ವಿತ್ ಕರಣ್’ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರಲು ಆಮಂತ್ರಣ ಸಿಕ್ಕಿದೆ.

ಸಮಂತಾ ಹಾಗೂ ಅಕ್ಷಯ್ ಕುಮಾರ್ ಅವರ ಕೆಮಿಸ್ಟ್ರಿ ಚೆನ್ನಾಗಿ ವರ್ಕ್ ಆಗಿದೆ ಎಂಬುದಕ್ಕೆ ಈ ಶೋನ ಪ್ರೋಮೋಗಳೇ ಸಾಕ್ಷಿ. ಈಗ ‘ಹೂ ಅಂಟಾವಾ ಮಾವ..’ ಹಾಡಿನಲ್ಲಿ ಇಬ್ಬರೂ ಒಟ್ಟಾಗಿ ಹೆಜ್ಜೆ ಹಾಕಿದ್ದು ಫ್ಯಾನ್ಸ್‍ ಗೆ ಇಷ್ಟವಾಗಿದೆ. ಇಬ್ಬರನ್ನೂ ಒಟ್ಟಾಗಿ ತೆರೆಮೇಲೆ ನೋಡಬೇಕು ಎಂದು ಫ್ಯಾನ್ಸ್ ಆಶಿಸಿದ್ದಾರೆ.