Saturday, January 18, 2025
ಅಂಕಣದಕ್ಷಿಣ ಕನ್ನಡಪುತ್ತೂರು

ನನ್ನ ಮನದ ಭಾವುಕ ಈ ನನ್ನ ಪ್ರಿಯತಮ

ಯಾವಾಗ ಎಲ್ಲಿ ಪರಿಚಿತನಾದವನೊ ನಾಕಾಣೆ ಇವನ

ಜೊತೆ ಕಳೆಯುವ ಸಮಯಗಳು ಎಂದೆಂದಿಗೂ ಮರೆಯಲಾಗುವುದಿಲ್ಲ .ಪ್ರತಿದಿನ ಪ್ರತಿ ಕ್ಷಣವೂ ಕೂಡ ನನ್ನ ಮನಸ್ಸು ಇವನ ಮೇಲೆ ಹಾತೊರೆಯುತ್ತಲೆ ಇರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನಲ್ಲಂತೂ ಇವನದೇ “ಹವ” ಇವನು ಕಾಣದೆ ಇದ್ದಾಗ ಒಂದೊಂದು ಕ್ಷಣ ಕೂಡ ನೆನೆಯಲಾಗದು. ಪ್ರತಿಯೊಬ್ಬರ ಮನೆ-ಮನೆಗಳಲ್ಲಿ ಮಳಿಗೆಗಳಲ್ಲಿ ಎಲ್ಲರ ಪ್ಯಾಂಟ್-ಶರ್ಟ್ ನ ಕಿಸೆಯ ಬಳಿ ನೆತ್ತಾಡಿಕೊಂಡೆ ಜೀವನವನ್ನು ಸಾಗಿಸುತ್ತಿರುತ್ತಾನೆ . ಎಲ್ಲರ ಬಾಳಿನ ಪ್ರತಿಯೊಂದು ಕ್ಷಣದಲ್ಲಿಯೂ ಇವನ ಪಾತ್ರ ಅಡಕವಾಗಿದ್ದರು ಇವನೇ ಸ್ವತಃ ಸೂತ್ರದಾರಿಯಾಗಿದ್ದರು. ಇವನು ಉಪಕಾರವನ್ನು ಮಾತ್ರ ಮರೆತುಬಿಡುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈತನ ದೇಹ ಸ್ವಲ್ಪ ಹೆಚ್ಚು ಕಡಿಮೆಯಂತೆ ಕಾಣಬಹುದು. ಆದರೆ ಅವನ ಮನಸ್ಸು ಹೇಗೆ ಲೆಕ್ಕ ಹಾಕಿದರೂ ಒಂದೇ ಅಲಂಕಾರದಿಂದ ಮನಸೆಂಬ ಕನ್ನಡಿಯ ಹಾಗೇ ಕಂಗೊಳಿಸುತ್ತಿರುವುದು. ಅವನೊಳಗಿರುವ ಮನಸ್ಸು ಅಂದರೆ ” ರೀಫಿಲ್ “ನ ಮನಸ್ಸು ಯಾವ ಬೆಲೆಯಲ್ಲಿ ಕೊಂಡುಕೊಂಡರು ಸಹ ಒಂದೇ ರೀತಿಯ ಮೆಚ್ಚುಗೆಯನ್ನು ನೀಡುವಂತದ್ದು.

ಇವನು ಎಲ್ಲರ ಬಾಳಿನ ಬೆಳಕು ಎನ್ನಬಹುದು. ಅಂದಿನ ದಿನಗಳಲ್ಲಿ ವಿದ್ಯೆಯನ್ನು ಪಡೆಯುವ ವಿದ್ಯಾರ್ಥಿಗಳು ಈ ಲೇಖನಿಯನ್ನು ಎಷ್ಟು ಇಷ್ಟಪಡುತ್ತಿದರೆಂದರೆ ಅದನ್ನು ಹೇಳಲು ಸಾಧ್ಯವಾಗದು.

ಅದೊಂದು ತಮಗೆ ಬೇಕಾದ ಅಮೂಲ್ಯವಾದ ವಸ್ತು ಎನ್ನುವ ಹಾಗೇ ನೋಡುತ್ತಿದ್ದರು .ಆದರೆ ಇತ್ತೀಚಿನ ದಿನಗಳಲ್ಲಿ ಆ ರಿಫೀಲ್ ಗೆ ಯಾವುದೇ ಬೆಲೆ ಕಾಣುತ್ತಿಲ್ಲ .
—-ನನ್ನೊಳಗಿರುವ ಅವನೆಂದರೆ ಈತನೇ—-
ನಾವು ಕೊಂಡುಕೊಳ್ಳುವ ಗರಿಷ್ಠ ರೂಪಾಯಿಯ ಪೆನ್ನುಗಳು ಕೂಡ ಪೆನ್ನೆ ಕನಿಷ್ಠ ರೂಪಾಯಿಯ ಪೆನ್ನುಗಳು ಕೂಡ ಪೆನ್ನೆ . ಎಷ್ಟೇ ಬೆಲೆಬಾಳುವ ಪೆನ್ನನ್ನು ಉಪಯೋಗಿಸಿದರು ಅದರ ಬೆಲೆ ಹೆಚ್ಚು ಕಡಿಮೆಯಾದರೂ ಅದರ ಘನತೆ ,ಗರಿಮೆ ಎಂದೆಂದಿಗೂ ಒಂದೇ .

 

ಬರಹ :ದೀಕ್ಷಿತ ಗೀರಿಶ್
ವಿದ್ಯಾರ್ಥಿನಿ,ವಿವೇಕಾನಂದ ಪತ್ರಿಕೋದ್ಯಮ ವಿಭಾಗ