Recent Posts

Sunday, January 19, 2025
ಸುದ್ದಿ

ಸಂತ ಅಲೋಶಿಯಸ್ ಕಾಲೇಜಿನ ’ವೃಕ್ಷಾಂಜಲಿ’ ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕ – ಕಹಳೆ ನ್ಯೂಸ್

ಮಂಗಳೂರು, ಜು 03: ನಗರದ ಸಂತ ಅಲೋಶಿಯಸ್ ಕಾಲೇಜಿಗೆ ವತಿಯಿಂದ ಹಮ್ಮಿಕೊಂಡಿರುವ ‘ವೃಕ್ಷಾಂಜಲಿ’ ವನ ಸಂರಕ್ಷಣಾ ಜಾಗೃತಿ ಕಾರ್ಯಕ್ರಮದಲ್ಲಿ ಶತಾಯುಷಿ ಡಾ.ಸಾಲುಮರದ ತಿಮ್ಮಕ್ಕ ಭಾಗವಹಿಸಿದರು. ಈ ಸಂದರ್ಭ ಅವರು ಕಾಲೇಜಿನ ಆವರಣದಲ್ಲಿರುವ ಸಂತ ಮದರ್ ತೆರೆಸಾ ಶಾಂತಿವನದಲ್ಲಿ ಕದಂಬ ಮತ್ತು ಸುರಗಿ ಎಂಬ ಎರಡು ಸಸಿಗಳನ್ನು ನೆಟ್ಟು ಸಾಲುಮರದ ತಿಮ್ಮಕ್ಕ ಅವರು ಅದಕ್ಕೆ ನೀರೆರೆದರು.ನಂತರ ಕಾಲೇಜಿನ ಟ್ರೀ ಪಾರ್ಕ್‌ನಲ್ಲಿರುವ ಪ್ರಣಾಳ ಗಿಡಗಳ ಉದ್ಯಾನವನವನ್ನು ಅವರು ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ತಾನು ಸ್ವಂತ ಸೂರಿಲ್ಲದೆ ಬೆಂಗಳೂರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದು, ಸರ್ಕಾರ ನನ್ನ ಸ್ವಂತ ಸೂರಿನ ಬೇಡಿಕೆಯನ್ನು ಪೂರೈಸಲಿಲ್ಲ. ಅದರೂ ಈಗಿನ ಸರ್ಕಾರ ಇದನ್ನು ನೆರವೇರಿಸಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಅವರ ದತ್ತು ಪುತ್ರ ಉಮೇಶ್, ಸತ್ತ ನಂತರ ಬಳಿಕ ಸ್ಮಾರಕ ಕಟ್ಟುವುದರಿಂದ ಪ್ರಯೋಜನವಿಲ್ಲ, ಸರ್ಕಾರ ಸಾಲು ಮರ ತಿಮ್ಮಕ್ಕ ಬದುಕಿರುವಾಗ ಅವರ ಕನಸುಗಳನ್ನು ನನಸು ಮಾಡುವುದು ಒಳಿತು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭ ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ರೆ. ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ., ಪರಿಸರ ತಜ್ಞ ಉಮೇಶ್ ಬಿ.ಎನ್., ಪರಿಸರ ಪ್ರೇಮಿ ದಿನೇಶ್ ಹೊಳ್ಳ, ಕಾಲೇಜಿನ ರಿಜಿಸ್ಟ್ರಾರ್ ಡಾ.ನರಹರಿ, , ಕಾರ್ಯಕ್ರಮದ ಸಂಯೋಜಕರಾದ ಶಿಲ್ಲಾ ಮತ್ತು ದುರ್ಗಾ ಮೆನನ್ ಮೊದಲಾದವರು ಉಪಸ್ಥಿತರಿದ್ದರು.