Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ಪದವಿಯಲ್ಲಿ 9ನೇ ರ್ಯಾಂಕ್ ಪಡೆದಿದ್ದ ವಿಕಲಚೇತನ ವಿದ್ಯಾರ್ಥಿ ಆದಿತ್ಯ ಭಟ್ ನಿಧನ – ಕಹಳೆ ನ್ಯೂಸ್

ಬಂಟ್ವಾಳ: ಮಂಗಳೂರು ವಿಶ್ವವಿದ್ಯಾನಿಲಯ ಕಳೆದ ಸಾಲಿನಲ್ಲಿ ನಡೆಸಿದ ಅಂತಿಮ ಪದವಿ ಪರೀಕ್ಷೆಯ ಬಿ.ಕಾಂ.ನಲ್ಲಿ 93.8 ಶೇ.ಅಂಕಗಳಿಸಿ 9ನೇ ರ‍್ಯಾಂಕ್ ಪಡೆದಿದ್ದ ವಿಕಲಚೇತನ ವಿದ್ಯಾರ್ಥಿ ಆದಿತ್ಯ ಭಟ್ ಸಾವನ್ನಪ್ಪಿದ್ದಾರೆ.

ಕಲ್ಲಡ್ಕ ಶ್ರೀರಾಮ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ ಆದಿತ್ಯ ಭಟ್ (21) ಮಾಂಸಖಂಡಗಳ ಕ್ಷೀಣತೆಯ ಸಮಸ್ಯೆಯಿಂದ ಬಳಲುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರ ಪರಿಣಾಮ ದೈಹಿಕ ಅಂಗವಿಕಲತೆಯಿಂದ ಬಳಲಿ ನಡೆಯಲಾಗದ ಸ್ಥಿತಿಯಲ್ಲಿದ್ದ ಆತನನ್ನು ತಂದೆ ಗಣೇಶ ಭಟ್ ಅವರೇ ಪ್ರತಿದಿನ ಕಾಲೇಜಿಗೆ ಕರೆದುಕೊಂಡು ಬರುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆತ ವೀಲ್‌ಚೇರ್‌ನಲ್ಲೇ ಕೂತು ತರಗತಿ ಕೇಳುತ್ತಿದ್ದ.

ಬಂಟ್ವಾಳದ ಸೂರಿಕುಮೇರು ನಿವಾಸಿಯಾಗಿರುವ ಆದಿತ್ಯ ಬಾಲ್ಯದಿಂದಲೇ ಕಲಿಕೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಎಸ್‌ಎಸ್‌ಎಲ್‌ಸಿಯಲ್ಲಿ 96.4 ಶೇ., ಪಿಯುಸಿಯಲ್ಲಿ 96 ಶೇ. ಅಂಕ ಪಡೆದಿದ್ದರು.