Recent Posts

Sunday, January 19, 2025
ಕ್ರೈಮ್ದಕ್ಷಿಣ ಕನ್ನಡಸುದ್ದಿ

ವಿದ್ಯಾರ್ಥಿಗಳ Truth or Dare ಆಟ : ಮಂಗಳೂರಿನ ಸೆಂಟ್ ಅಲೋಶಿಯಸ್ ಪಿಯು ಕಾಲೇಜು ಯೂನಿಫಾರಂನಲ್ಲೇ ವಿದ್ಯಾರ್ಥಿಗಳ ಚುಂಬನ ವಿಡಿಯೋ ವೈರಲ್​ ಬೆನ್ನಲ್ಲೇ ,ವಿದ್ಯಾರ್ಥಿನಿ-ವಿದ್ಯಾರ್ಥಿ ಸೆಕ್ಸ್​ ಮಾಡಿರುವ ಅಶ್ಲೀಲ ವಿಡಿಯೋ ಲೀಕ್​! – ಕಹಳೆ ನ್ಯೂಸ್

ಮಂಗಳೂರು: ನಗರದ ಖಾಸಗಿ ಪಿಯು ಕಾಲೇಜೊಂದರ ವಿದ್ಯಾರ್ಥಿಗಳ ಕಿಸ್ಸಿಂಗ್​ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಬೆನ್ನಲ್ಲೇ ಸೆಕ್ಸ್​ ವಿಡಿಯೋ ಕೂಡ ವೈರಲ್​ ಆಗಿದೆ.

ಕಾಲೇಜು ಯೂನಿಫಾರಂನಲ್ಲೇ ಇರುವ ಕಾರಣದಿಂದ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಎನ್ನುವುದು ಬೆಳಕಿಗೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಮಂಗಳೂರು ಪೊಲೀಸರು ವಿದ್ಯಾರ್ಥಿಗಳನ್ನ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ವಿದ್ಯಾರ್ಥಿನಿ-ವಿದ್ಯಾರ್ಥಿ ಸೆಕ್ಸ್​ ಮಾಡಿರುವ ವಿಡಿಯೋ ಕೂಡ ವೈರಲ್​ ಆಗಿದ್ದು, ವಿದ್ಯಾರ್ಥಿಗಳು ದಾರಿ ತಪ್ಪಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆತಂಕ ಮನೆ ಮಾಡಿದೆ.

ಈ ಪ್ರಕರಣದಲ್ಲಿ ತಂಡದ ಇಬ್ಬರು ವಿದ್ಯಾರ್ಥಿಗಳು ಬಾವುಟಗುಡ್ಡೆಯಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ರೂಂ ಪಡೆದಿದ್ದರು. ಇಲ್ಲೇ ವಿದ್ಯಾರ್ಥಿಗಳು Truth or Dare ಆಟ ಆಡಿದ್ದಾರೆ. Truth ಅಂದ್ರೆ ಸತ್ಯ ಹೇಳಬೇಕು, Dare ಅಂದ್ರೆ ಹೇಳಿದ್ದನ್ನು ಮಾಡಿ ತೋರಿಸಬೇಕು. ಈ ಸಂದರ್ಭದಲ್ಲಿ Truth or Dare ಆಟದಂತೇ ವಿದ್ಯಾರ್ಥಿಗಳು ಪರಸ್ಪರ ಕಿಸ್ ಮಾಡಿದ್ದಾರೆ. ಅಲ್ಲಿಯೇ ಈ ವಿಡಿಯೋ ಮಾಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. Truth or Dare ಆಟದ ನೆಪದಲ್ಲಿ ಕಿಸ್ಸಿಂಗ್​ ಮಾಡುತ್ತಿರುವ ದೃಶ್ಯವನ್ನು ಸೆರೆಹಿಡಿದ ವಿದ್ಯಾರ್ಥಿಯೇ ಅದನ್ನು ವೈರಲ್ ಮಾಡಿದ್ದಾನೆ. ಇದರ ಬೆನ್ನಲ್ಲೇ ಮತ್ತೊಂದು ಸೆಕ್ಸ್​ ವಿಡಿಯೋ ವೈರಲ್​ ಆಗಿದ್ದು, ಇವರ ಕೃತ್ಯಕ್ಕೆ ಕಾಲೇಜಿನ ಇರತ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಮುಜುಗರ ಉಂಟಾಗಿದೆ.

ಈ ಪ್ರಕರಣದಲ್ಲಿರುವ ವಿದ್ಯಾರ್ಥಿಗಳ ಪೈಕಿ ಹಲವರು ಅಪ್ರಾಪ್ತರು. ವಿದ್ಯಾಭ್ಯಾಸ ಮಾಡುತ್ತಲೇ ಸಾಧನೆಯ ಕನಸಿನ ಬೆನ್ನುಹತ್ತ ಬೇಕಿದ್ದ ಹದಿಹರೆಯದ ಮಕ್ಕಳು ದಾರಿ ತಪ್ಪಿರುವ ಸುದ್ದಿ ಆತಂಕ ಸೃಷ್ಟಿಸಿದೆ.