Recent Posts

Monday, January 20, 2025
ದಕ್ಷಿಣ ಕನ್ನಡಸುದ್ದಿ

ಸ್ಮಾರ್ಟ್ ಸಿಟಿಯ ಗುಂಡಿ ಮುಚ್ಚಿದ ಶರಣಪ್ಪನಿಗೆ ಶರಣೋ ಶರಣು ಎಂದ ಮಂಗಳೂರಿಗರು- ಕಹಳೆ ನ್ಯೂಸ್

ಮಂಗಳೂರು: ಮಂಗಳೂರು ನಗರದಲ್ಲಿ ಟ್ರಾಫಿಕ್ ಪೊಲೀಸರು ದುಡ್ಡು ವಸೂಲಿಗೆಂದೇ ನಿಲ್ತಾರೆ. ಅವರಿಗೆ ಕಿಂಚಿತ್ತೂ ದಯೆ ಕರುಣೆ ಅನ್ನೋದು ಇಲ್ಲ ಎಂಬ ಅಪಾದನೆ ಪ್ರತಿನಿತ್ಯ ಕೇಳಿ ಬರುತ್ತದೆ.

ಆದ್ರೇ ಯುನಿಫರ್ಮ್ ಹಾಕಿದ ಪೊಲೀಸರ ಒಳಗೂ ಒಂದು ಕಾಳಜಿಯ ಹೃದಯ ಇದೆ. ಸಾರ್ವಜನಿಕರ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಪೊಲೀಸ್ ಕಾನ್ಸ್ ಸ್ಟೇಬಲ್ ಒಬ್ಬರು ವಾಹನ ಸವಾರರ ಕಷ್ಟ ಅರಿತು ಸ್ವತಃ ಗುಂಡಿ ಮುಚ್ಚಿ ಜನರ ಮನಗೆದ್ದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ನಗರ ಪಶ್ಚಿಮ (ಪಾಂಡೇಶ್ವರ) ಸಂಚಾರಿ ಪೊಲೀಸ್ ಠಾಣೆಯ ಕಾನ್ಸ್ ಸ್ಟೇಬಲ್ ಶರಣಪ್ಪ ಎಂಬುವವರು ನಗರದ ಸ್ಟೇಟ್‍ಬ್ಯಾಂಕ್ ಬಳಿಯ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿಯ ರಸ್ತೆಯಲ್ಲಿ ಸ್ಮಾರ್ಟ್ ಸಿಟಿಯ ಕಾಮಗಾರಿಯಿಂದ ದೊಡ್ಡ ದೊಡ್ಡ ಹೊಂಡ ನಿರ್ಮಾಣವಾಗಿತ್ತು.

ಇಂದು ಬೆಳಗ್ಗೆ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶರಣಪ್ಪ ಅವರು ವಾಹನ ಸವಾರರ ಕಷ್ಟಕ್ಕೆ ಮರುಗಿ ಹತ್ತಿರದಲ್ಲೇ ಇದ್ದ ಇಂಟರ್‍ಲಾಕ್, ಕಾಂಕ್ರೀಟ್ ತುಂಡುಗಳನ್ನು ಜೋಡಿಸಿ ರಸ್ತೆ ರೀಪೇರಿಗೆ ಇಳಿದಿದ್ದಾರೆ.

ಇದನ್ನು ಕಂಡ ರಿಕ್ಷಾ ಡ್ರೈವರ್ ಸೇರಿ ಹಲವರು ಇವರಿಗೆ ಕೈ ಜೋಡಿಸಿದರು. ಈ ಸಮಾಜಮುಖಿ ಕೆಲಸವನ್ನು ಸಾರ್ವಜನಿಕರೊಬ್ಬರು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗಿದ್ದು, ಶರಣಪ್ಪ ಅವರ ಸಮಾಜಮುಖಿ ಕಾರ್ಯಕ್ಕೆ ಭೇಷ್‌ ಎಂದಿದ್ದಾರೆ. ಈ ಘಟನೆಯ ಮೂಲಕವಾದರೂ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಸುವ ಎಂಜಿನಿಯರ್ ಗಳು ಕಾಮಗಾರಿ ಕೊನೆಗೊಳಿಸುವಾಗ ಎಚ್ಚೆತ್ತು ಕಾಮಗಾರಿಯನ್ನು ಸಂಪೂರ್ಣವಾಗಿ ಕೊನೆಗೊಳಿಸುವುದು ಉತ್ತಮ.

“ಅಲ್ಲಿ ಮೂರ್ನಾಲ್ಕು ಗುಂಡಿಗಳಿತ್ತು. ಅದನ್ನು ಹತ್ತಿರದಲ್ಲೇ ಇದ್ದ ಕಲ್ಲು ತಂದು ಮುಚ್ಚಿದ್ದೇ. ಜನರ ಸುರಕ್ಷತೆಗಾಗಿ, ಜನರಿಗೆ ಒಳ್ಳೆದಾಗ್ಲಿ ಅನ್ನೋ ಕಾರಣಕ್ಕಾಗಿ ಮಾಡಿದ್ದೇನೆ. ಅದರಲ್ಲೇನೂ ಇಲ್ಲಾ.”

                                     :- ಶರಣಪ್ಪ, ಪಶ್ಚಿಮ ಸಂಚಾರಿ ಠಾಣೆಯ ಕಾನ್ಸ್ ಸ್ಟೇಬಲ್