ಕಟ್ಟಡ ಕಾಮಗಾರಿ ಸಂದರ್ಭದಲ್ಲಿ ಮೃತಪಟ್ಟ ಅಮ್ಮುಂಜೆ ನರಂಗಬೆಟ್ಟು ನಿವಾಸಿ ದೀಪಕ್ ಅವರ ಮನೆಗೆ ಭೇಟಿ ನೀಡಿ, ಸಾಂತ್ವಾನ ಹೇಳಿದ ಶಾಸಕ ರಾಜೇಶ್ ನಾಯ್ಕ್ – ಕಹಳೆ ನ್ಯೂಸ್
ಬಂಟ್ವಾಳ: ಮಂಗಳೂರಿನಲ್ಲಿ ಕಟ್ಟಡ ಕಾಮಗಾರಿ ಸಂದರ್ಭದಲ್ಲಿ ಅವಘಡದಲ್ಲಿ ಮೃತಪಟ್ಟ ಅಮ್ಮುಂಜೆ ನರಂಗಬೆಟ್ಟು ನಿವಾಸಿ ದೀಪಕ್ ಇವರ ಮನೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಸಾಂತ್ವಾನ ಹೇಳಿ,ಸರಕಾರದಿಂದ ದೊರಕುವ ಪರಿಹಾರವನ್ನು ದೀಪಕ್ ಕುಟುಂಬಕ್ಕೆ ಒದಗಿಸುವ ಭರವಸೆ ನೀಡಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ವಾಮನ ಆಚಾರ್ಯ,ಪಂ.ಉಪಾಧ್ಯಕ್ಷರಾದ ಪ್ರಮೀಳ,ಪಂ.ಸದಸ್ಯರಾದ ಕಾರ್ತಿಕ್ ಬಲ್ಲಾಳ್,ರವೀಂದ್ರ ಸುವರ್ಣ ,ರೊನಾಲ್ಡ್ ಡಿಸೋಜ, ರಾಧಾಕೃಷ್ಣ ತಂತ್ರಿ,ಭಾಗೀರಥಿ,ಲೀಲಾ,ಲಕ್ಷ್ಮೀ, ಪಂ.ಅಭಿವೃದ್ಧಿ ಅಧಿಕಾರಿ ನಯನ,ಪ್ರಮುಖರಾದ ಕಿಶೋರ್ ಪಲ್ಲಿಪಾಡಿ,ಪ್ರಕಾಶ್ ಬಡಗಬೆಳ್ಳೂರು, ಜನಾರ್ಧನ ಬಾರಿಂಜೆ,ಸಂದೀಪ್ ಉಪಸ್ಥಿತರಿದ್ದರು.