ಬೆಂಗಳೂರು(ಜು.03): ದೇಶದ ರಾಜಕೀಯದಲ್ಲಿ ಅತ್ಯಂತ ಪ್ರಭಾವ ಹೊಂದಿರುವ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ 10 ವರ್ಷಗಳಿಂದ ಬಿಬಿಎಂಪಿಗೆ 3 ಕೋಟಿ ರೂ.ಗೂ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಕಹಳೆ ನ್ಯೂಸ್ ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ದೇವೇಗೌಡರ ದೊಡ್ಡ ಸೊಸೆ ಕವಿತಾ – 55,21,479 ರೂ., ದೇವೇಗೌಡರ ಮಗಳು ಶೈಲಾ 55,21,479 ರೂ. ಬಾಕಿ, ಸೊಸೆ ಭವಾನಿ ರೇವಣ್ಣ – 41,79,440 ರೂ ಬಾಕಿ, ಮಗಳು ಹೆಚ್.ಡಿ ಅನುಸೂಯ – 55,21,479 ರೂ. ಬಾಕಿ, ಸೊಸೆ ಅನಿತಾ ಕುಮಾರಸ್ವಾಮಿ – 54,85,521 ರೂ. ಬಾಕಿ, ಮಗ ಹೆಚ್.ಡಿ ರಮೇಶ್ – 55,21,389 – ರೂ. ಬಾಕಿ ಸೇರಿ ದೇವೇಗೌಡರ ಕುಟುಂಬದಿಂದ ಒಟ್ಟು 3,17,50,787 ರೂ. ತೆರಿಗೆ ಬಾಕಿ ಇದೆ.
ಒಟ್ಟು 63 ಕಟ್ಟಡಗಳಿಂದ 559 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ತೆರಿಗೆ ಬಾಕಿ ಉಳಿದಿದೆ. ದಾಖಲೆಯಲ್ಲಿರುವ ಆಸ್ತಿಯ ಚದರಡಿಯೇ ಬೇರೆ, ಪಾಲಿಕೆಗೆ ಮಾಹಿತಿ ನೀಡಿರುವ ಆಸ್ತಿಯೇ ಬೇರೆಯಾಗಿದೆ ಎನ್ನಲಾಗಿದೆ.
ಈ ಕುರಿತಂತೆ ಕಹಳೆ ನ್ಯೂಸ್ ಪ್ರತಿಕ್ರಿಯಿಸಿರುವ ಕಂದಾಯ ಇಲಾಖೆ ಜಂಟಿ ಆಯುಕ್ತ ವೆಂಕಟಾಲಪತಿ, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಸಂಬಂಧಪಟ್ಟ ವಲಯದಿಂದ ಮಾಹಿತಿ ಪಡೆದು ಳಿಸಬಹುದು. 10 ವರ್ಷಗಳಿಂದ ಬಾಕಿ ಉಳಿಯುವ ಸಾಧ್ಯತೆ ಇಲ್ಲ. ಕೋರ್ಟ್ ಕೇಸ್ಗಳಿದ್ದರೆ ಮಾತ್ರ ಹಾಗಾಗುತ್ತೆ. ಇಲ್ಲವಾದಲ್ಲಿ ಎರಡು ವರ್ಷಕ್ಕಿಂತ ಹೆಚ್ಚು ಸಮಯ ತೆರಿಗೆ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೇನಾದರೂ ಆಗಿದ್ದಲ್ಲಿ ಮಾಸಿಕ ಶೇ. 2ರಷ್ಟು ಬಡ್ಡಿ ಸಮೇತ ತೆರಿಗೆ ವಸೂಲಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.