ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಪುತ್ತೂರು ಹಾಗೂ ಯೂತ್ ರೆಡ್ ಕ್ರಾಸ್ ಯುನಿಟ್ ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪುತ್ತೂರು ಇದರ ಆಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಬಿ. ಚಂದ್ರಹಾಸ ರೈ ಇವರು ಜನಸಂಖ್ಯೆ ಹೆಚ್ಚಳದ ಸಮಸ್ಯೆ ಮತ್ತು ಪರಿಹಾರದ ಬಗ್ಗೆ ಮಾತನಾಡಿದರು. ಇತರ ದೇಶಕ್ಕೆ ಹೋಲಿಸಿದರೆ ನಮ್ಮ ದೇಶದಲ್ಲಿ ಜನಸಂಖ್ಯೆ ಹೆಚ್ಚಳದ ಪರಿಣಾಮ, ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ ಆದುದರಿಂದ ಜನಸಂಖ್ಯಾ ನಿಯಂತ್ರಣ ಅತ್ಯವಶ್ಯಕ ಎಂದು ತಿಳಿಸಿದರು.
ಕಾರ್ಯಕ್ರಮದ ಮುಂದಕ್ಕೆ ಪಾಟ್ರಿಕ್ ಸಿಪ್ರಿಯಾನ್ ಮಸ್ಕರೇನಸ್ ಇವರು ಮಾತನಾಡಿ ರೆಡ್ ಕ್ರಾಸ್ ಬೆಳೆದು ಬಂದ ಹಾದಿ ಮತ್ತು ಇತಿಹಾಸ, ಮಹತ್ವದ ಕುರಿತು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ ಪಿ ಮಾತನಾಡುತ್ತಾ ಜನಸಂಖ್ಯಾ ದಿನದ ಆಚರಣೆಯ ಮುಖ್ಯ ಧ್ಯೇಯ, ಮಾನವ ಹಕ್ಕುಗಳ ರಕ್ಷಣೆಯ ಮಹತ್ವ ಹಾಗೂ ಜನಸಂಖ್ಯಾ ನಿಯಂತ್ರಣದ ಬಗ್ಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಆಸ್ಕರ್ ಆನಂದ್, ಕಾರ್ಯದರ್ಶಿಗಳು ರೆಡ್ ಕ್ರಾಸ್ ಯುನಿಟ್, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರೆಡ್ ಕ್ರಾಸ್ ಯುನಿಟ್ ಇದರ ಸಂಯೋಜಕರಾದ ಶ್ರೀ ಎಮ್. ಕೆ. ನವೀನ್ ಕುಮಾರ್ ಮತ್ತು ಶ್ರೀ ತಿಲಕ್ ಟಿ ಇವರು ಉಪಸ್ಥಿತರಿದ್ದರು.
ಯೂತ್ ರೆಡ್ ಕ್ರಾಸ್ ಯುನಿಟ್ ವಿವೇಕಾನಂದ ಕಾನೂನು ಮಹಾವಿದ್ಯಾಲಯ ಇದರ ಸ್ವಯಂ ಸೇವಕರಾದ ಕು. ವಿದ್ಯಾ ಸ್ವಾಗತಿಸಿ, ಕು. ಹೇಮಲತಾ ಕೆ. ವಂದಿಸಿದರು. ಕು. ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.