Friday, January 24, 2025
ಸುದ್ದಿ

ಬೈಂದೂರು ಲಾಡ್ಜ್‌ನಲ್ಲಿ ಅನ್ಯಕೋಮಿನ ವ್ಯಕ್ತಿ ಜೊತೆ ಹಿಂದೂ ಯುವತಿ ಪತ್ತೆ – ಕಹಳೆ ನ್ಯೂಸ್

ಉಡುಪಿ: ಭಿನ್ನಕೋಮಿನ ಜೋಡಿಯೊಂದು ಲಾಡ್ಜ್‌ಗೆ ತೆರಳಿದ ಮಾಹಿತಿ ತಿಳಿದ ಹಿಂದೂ ಸಂಘಟನೆ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ರವಾಣಿಸಿದ್ದು, ಪೊಲೀಸರು ಜೋಡಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ ಘಟನೆಯೊಂದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಂದನವನ ವಸತಿಗೃಹದಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ-ತೊಕ್ಕೊಟ್ಟು ಪರಿಸರದ ಗುಜುರಿ ವ್ಯಾಪಾರಿ ಅಮಿರ್ ಅಲಿ(45) ಎಂಬಾತ ತನ್ನ ಅಂಗಡಿಯಲ್ಲಿ ಕೆಲಸಕ್ಕಿರುವ ಉಳ್ಳಾಲದ ನಿವಾಸಿ ಶ್ರಾವಣ್ಯ (28) ಎಂಬ ಹಿಂದೂ ಯುವತಿಯನ್ನು ಲಾಡ್ಜ್ ಗೆ ಕರೆದುಕೊಂಡು ಹೋಗಿದ್ದ ಎನ್ನುವ ಮಾಹಿತಿಯೊಂದು ಮೂಲಗಳಿಂದ ತಿಳಿದುಬಂದಿತ್ತು
ಜೋಡಿಯು ಉಡುಪಿಯತ್ತ ತೆರಳಿರುವ ಖಚಿತ ಮಾಹಿತಿ ಪಡೆದ ಹಿಂದೂ ಸಂಘಟನೆಗಳ ಕಾರ್ಯಕರ್ತರು ನಿಗಾ ಇಟ್ಟಿದ್ದು, ಬೈಂದೂರು ಸಮೀಪದ ಲಾಡ್ಜ್ ಗೆ ತೆರಳಿದ ವಿಷಯ ಗಮನಕ್ಕೆ ಬರುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪೊಲೀಸರು ಜೋಡಿಯನ್ನು ವಶಕ್ಕೆ ಪಡೆದಿದ್ದು, ಯುವತಿಯ ಒಪ್ಪಿಗೆಯ ಮೇರೆಗೆ ಲಾಡ್ಜ್ ಗೆ ತೆರಳಿದ್ದಾರೆ ಎಂದು ಹೇಳಲಾಗಿದ್ದು, ಯುವತಿಯ ಹೆತ್ತವರನ್ನು ಠಾಣೆಗೆ ಕರೆಸಲಾಗಿದೆ ಎಂದು ತಿಳಿದುಬಂದಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು