Sunday, November 24, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಫೇಸ್ಬುಕ್ ನಲ್ಲಿ ಪರಿಚಯವಾಗಿದ್ದವನೊಂದಿಗೆ ಪ್ರೀತಿ…!! ಬಳಿಕ ಅಸಲಿ ವಿಷಯ ತಿಳಿದು ಯುವತಿಗೆ ಶಾಕ್- ಕಹಳೆ ನ್ಯೂಸ್

ವಿಟ್ಲ: ಯುವತಿಯೋರ್ವರಿಗೆ ಫೇಸ್ ಬುಕ್ ನಲ್ಲಿ ಪರಿಚಯವಾದ ವ್ಯಕ್ತಿಯೊರ್ವರ ಜಾಡುಹಿಡಿಯ ಹೊರಟ ಮನೆಯವರಿಗೆ, ಮಗಳೊಂದಿಗೆ ಸ್ನೇಹಚಾರ ಮಾಡಿರುವುದು ಮಂಗಳಮುಖಿ ಎನ್ನುವ ಆಘಾತಕಾರಿ ವಿಚಾರ ಬೆಳಕಿಗೆ ಬಂದ ಬಗ್ಗೆ ವರದಿಯಾಗಿದೆ.

ಇಂತದೊಂದು ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಗ್ರಾಮ ಒಂದರಲ್ಲಿ ನಡೆದಿದ್ದು, ಗ್ರಾಮದ ಯುವತಿ ತನಗೆ ಫೇಸ್ಬುಕ್ ನಲ್ಲಿ ನಾಲ್ಕು ವರ್ಷದ ಹಿಂದೆ ಪರಿಚಯವಾಗಿದ್ದ ಪ್ರದೀಪ್ ಎಂಬಾತನ ಪ್ರೀತಿಯ ಬಲೆಗೆ ಬಿದ್ದಿದ್ದಳು. ಪರಸ್ಪರ ಫೋನ್ ಮೂಲಕ ಮಾತನಾಡುತ್ತಿದ್ದು, ಆತ ತನ್ನನ್ನು ತಾನು ಸಿವಿಲ್ ಇಂಜಿನಿಯರ್ ಎಂದು ಪರಿಚಯಿಸಿಕೊಂಡಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರದೀಪ್ ಹೆಸರಿನ ವ್ಯಕ್ತಿಯ ಪ್ರೀತಿಯ ಜಾಲಕ್ಕೆ ಬಿದ್ದಿದ್ದ ಯುವತಿ, ಮನೆಯವರ ಬುದ್ಧಿ ಮಾತುಗಳಿಗೆ ಕಿವಿಗೊಡುತ್ತಿರಲಿಲ್ಲ. ಕಡೆಗೆ ಈ ವಿಷಯ ಯುವತಿಯ ತಾಯಿ ಮೂಲಕ ವಕೀಲೆಯೊಬ್ಬರ ಕಿವಿಗೆ ಬಿದ್ದಿದೆ. ಅವರು ಕೂಡ ಆಕೆಯನ್ನು ಕರೆಸಿಕೊಂಡು ಮನವೊಲಿಸಲು ಪ್ರಯತ್ನಿಸಿದರು ಸಾಧ್ಯವಾಗಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಡೆಗೆ ಪ್ರದೀಪನ ಮೂಲ ಪತ್ತೆ ಹಚ್ಚಲು ವಕೀಲೆ ಮುಂದಾಗಿದ್ದು ಇದಕ್ಕಾಗಿ ವಿಟ್ಲ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಉಡುಪಿ ಜಿಲ್ಲೆ ಶಂಕರನಾರಾಯಣ ಪೆÇಲೀಸರ ಸಹಕಾರದೊಂದಿಗೆ ಪ್ರದೀಪನ ಸಿದ್ದಾಪುರದ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಪ್ರದೀಪ್ ಎಂಬಾತನ ಹೆಸರಿನಲ್ಲಿ ಯುವತಿ ಜೊತೆ ಮಾತನಾಡುತ್ತಿದ್ದಿದ್ದು ಜ್ಯೋತಿ ಎಂಬ ಹೆಸರಿನ ಮಂಗಳಮುಖಿ ಎಂಬ ಶಾಕಿಂಗ್ ಸಂಗತಿ ಬಯಲಾಗಿದೆ. ಒಟ್ಟಾರೆಯಾಗಿ ಯುವತಿಯ ಐದು ವರ್ಷಗಳ ಪ್ರೇಮ ಪ್ರಕರಣ ಮನೆಯವರ ಮಧ್ಯಪ್ರವೇಶದಿಂದ ಅಂತ್ಯಕಂಡಿದೆ.