Recent Posts

Tuesday, January 21, 2025
ಸುದ್ದಿ

ಭಾರತೀಯ ಮಜ್ದೂರ್ ಸಂಘದ 67ನೇ ಸ್ಥಾಪನಾ ದಿನಾಚರಣೆ – ಕಹಳೆ ನ್ಯೂಸ್

ಮಂಗಳೂರು: ಭಾರತೀಯ ಮಜ್ದೂರ್ ಸಂಘದ 67ನೇ ಸ್ಥಾಪನಾ ದಿನಾಚರಣೆ ಪಣಂಬೂರು ಬಿಎಂಎಸ್ ಕಚೇರಿಯಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರು ಭಾಗವಹಿಸಿ ಧ್ವಜಾರೋಹಣ ಮಾಡಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಇದೇ ಸಂದರ್ಭದಲ್ಲಿ ಕಾರ್ಮಿಕ ಮುಖಂಡರು ತಮ್ಮ ಸಮಸ್ಯೆಗಳಾದ ಎನ್ ಎಂ ಪಿ ಎ ನಲ್ಲಿ ಉದ್ಯೋಗ ನೇಮಕಾತಿ, ಗುತ್ತಿಗೆ ಆಧಾರಿತ ಕಾರ್ಮಿಕರ ವಾರದ ರಜಾ, ದಿನದ ವೇತನವನ್ನು ನೀಡದೆ ಇರುವ ಬಗ್ಗೆ ಶಾಸಕರ ಗಮನಕ್ಕೆ ತಂದಾಗ ಮಾನ್ಯ ಸಂಸದರಲ್ಲಿ ಮಾತುಕತೆ ನಡೆಸಿ ಎನ್ ಎಂ ಪಿ ಎ ಚೇರ್ಮನ್ ಗಮನಕ್ಕೆ ತರಲಾಗುವುದು ಡಾ.ಭರತ್ ಶೆಟ್ಟಿಯವರು ಹೇಳಿದರು.
ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ವೇಯಿಟ್ ಲಿಫ್ಟರ್ ಅಕ್ಷತಾ ಪೂಜಾರಿ ಅವರನ್ನು ಶಾಸಕರು ಸನ್ಮಾನಿಸಿದರು. ಬಿಎಂಎಸ್ ವತಿಯಿಂದ ಶಾಸಕರನ್ನು ಗೌರವಿಸಲಾಯಿತು.
ಗೌರವಾಧ್ಯಕ್ಷರಾದ ವಿಶ್ವನಾಥ ಶೆಟ್ಟಿ, ನಿವೃತ್ತ ಬಿಎಂಎಸ್ ಪಿಂಚಣಿ ಅಸೋಸಿಯೇಶನ್ ಅಧ್ಯಕ್ಷ ಯೋಗೀಶ್ ಆಚಾರ್ಯ, ಎನ್ ಎಂಪಿಎ ಬಿಎಂಎಸ್ ಕಾರ್ಯಾಧ್ಯಕ್ಷ ರಮೇಶ್ ಭಂಡಾರಿ, ಕಾರ್ಯದರ್ಶಿ ವಿಘ್ನೇಶ್ ಸಹಿತ ಅನೇಕ ಪದಾಧಿಕಾರಿಗಳು, ಗಣ್ಯರು, ಮುಖಂಡರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಸಕ ಡಾ.ವೈ. ಭರತ್ ಶೆಟ್ಟಿ

ಭಾರತೀಯ ಮಜ್ದೂರ್ ಸಂಘದ 67ನೇ ಸ್ಥಾಪನಾ ದಿನಾಚರಣೆ

ಅಂತರಾಷ್ಟ್ರೀಯ ವೇಯಿಟ್ ಲಿಫ್ಟರ್ ಅಕ್ಷತಾ ಪೂಜಾರಿ