Sunday, January 19, 2025
ಸುದ್ದಿ

ಲೈಂಗಿಕ ಕಿರುಕುಳ ಆಪಾದಿತನಿಗೆ ಸನ್ನಡತೆ ಪ್ರಮಾಣಪತ್ರ ನೀಡಿದ ರಮ್ಯಾ – ಕಹಳೆ ನ್ಯೂಸ್

ದೆಹಲಿಕಾಂಗ್ರೆಸ್‌ನ ಐಟಿ ಸೆಲ್‌ನಲ್ಲಿ ತನ್ನ ಸಹೋದ್ಯೋಗಿನಿಗೆ ಲೈಂಗಿಕ ಕಿರುಕುಳ ನೀಡಿದ ಆಪಾದನೆ ಮೇಲೆ ಪ್ರಕರಣ ದಾಖಲಾಗಿರುವ ಚಿರಾಗ್ ಪಟ್ನಾಯಕ್‌ ಬೆನ್ನಿಗೆ ಬಲವಾಗಿ ನಿಂತಿರುವ ಪಕ್ಷದ ನಾಯಕಿ ಹಾಗು  ಮಂಡ್ಯದ ಮಾಜಿ ಸಂಸದೆ ರಮ್ಯಾ ಅಲಿಯಾಸ್‌ ದಿವ್ಯ ಸ್ಪಂದನಾ, ಟ್ವಿಟರ್‌ನಲ್ಲಿ ತಿಪ್ಪೆ ಸಾರಿಸುವ ಕೆಲಸ ಮುಂದುವರೆಸಿದ್ದಾರೆ.

ಪಟ್ನಾಯಕ್‌ನ ಸ್ವಭಾವದ ಕುರಿತಂತೆ ತಮ್ಮದೇ ವ್ಯಖ್ಯಾನ ನೀಡಿರುವ ರಮ್ಯಾ, ಸುದೀರ್ಘ ವಿವರಣೆ ಕೊಟ್ಟಿದ್ದು ಇದಕ್ಕೆ ಐಟಿ ಸೆಲ್‌ನ ಕೆಲ ಸದಸ್ಯೆ ಸಹಿ ಇರುವ ಪತ್ರವೊಂದರ ಚಿತ್ರ ತೆಗೆದು ಪ್ರಕಟಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಲೇ ಆಪಾದಿತನ ಬೆಂಬಲಕ್ಕೆ ನಿಂತು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಇಮೇಜ್‌ಗೆ ಧಕ್ಕೆ ತಂದುಕೊಂಡಿರುವ ರಮ್ಯಾ ಇದೀಗ ತಮ್ಮ ನಡೆಯನ್ನು ಇನ್ನಷ್ಟು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ ಎಂಬ ಟೀಕೆಗೆ ಗ್ರಾಸವಾಗಿದ್ದಾರೆ.