Wednesday, January 22, 2025
ಸುದ್ದಿ

ಕಾರ್ಕಳ: ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಸುಶಾಂತ್‌ ಶೆಟ್ಟಿ ನಿಧನ –ಕಹಳೆ ನ್ಯೂಸ್

ಕಾರ್ಕಳ: ಅನಾರೋಗ್ಯದ ಕಾರಣದಿಂದ ರಾಜ್ಯ ಮಟ್ಟದ ಕಬಡ್ಡಿ ಆಟಗಾರ, ಹೆಬ್ರಿ ತಾಲ್ಲೂಕು ಮುದ್ರಾಡಿಯ ಬಲ್ಲಾಡಿ ನಿವಾಸಿ ಸುಶಾಂತ್ ಶೆಟ್ಟಿ (32) ನಿನ್ನೆ ರಾತ್ರಿ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ..

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಇಲಿ ಜ್ವರದಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.

ಉಡುಪಿಯ ಫೈನಾನ್ಸ್‌ ಒಂದರಲ್ಲಿ ಉದ್ಯೋಗಿಯಾಗಿದ್ದ ಸುಶಾಂತ್ ಶೆಟ್ಟಿಗೆ ಕೆಲ ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು.

ಜ್ವರ ತೀವ್ರಗೊಂಡ ಕಾರಣ ನಿನ್ನೆ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿಪರೀತ ಜ್ವರದ ಕಾರಣ ಕಿಡ್ನಿ ಮತ್ತು ಲಿವರ್‌ನ ಮೇಲೂ ಪರಿಣಾಮ ಬೀರಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ.

ಸಾವಿಗೆ ನಿಖರವಾದ ಕಾರಣ ವೈದ್ಯಕೀಯ ಪರೀಕ್ಷೆಯಿಂದ ಇನ್ನಷ್ಟೇ ಬರಬೇಕಿದೆ.ಇವರು ತಂದೆ-ತಾಯಿ ಸಹೋದರ, ಸಹೋದರಿ, ಪತ್ನಿ ಹಾಗೂ ಒಂದು ವರ್ಷದ ಪುತ್ರನನ್ನು ಅಗಲಿದ್ದಾರೆ.

ಸುಶಾಂತ್‌ ಶೆಟ್ಟಿ