Thursday, January 23, 2025
ಪುತ್ತೂರು

ಪುತ್ತೂರು : ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ತೆಂಕಿಲ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕ ಹಾಗೂ ರೇಡಿಯೋ ಪಾಂಚಜನ್ಯ 90.8 ಎಫ್.ಎಂ. ನೇತೃತ್ವದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ನಡೆದ ತಾಲೂಕು ಮಟ್ಟದ ದೇಶಭಕ್ತಿಗೀತೆ ಸ್ಪರ್ಧೆ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು: ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ತೆಂಕಿಲ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕ ಹಾಗೂ ರೇಡಿಯೋ ಪಾಂಚಜನ್ಯ 90.8 ಎಫ್.ಎಂ. ನೇತೃತ್ವದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ನಡೆದ ತಾಲೂಕು ಮಟ್ಟದ ದೇಶಭಕ್ತಿಗೀತೆ ಸ್ಪರ್ಧೆ ನಡೆಯಿತು.
ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರ ವಿವರ ಇಂತಿದೆ:-
ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಪಿಯುಸಿ ವಿಭಾಗದಲ್ಲಿ ವಿವೇಕಾನಂದ ಪಿಯುಸಿ ವಿದ್ಯಾರ್ಥಿನಿ ದೀಕ್ಷಾ ಶರ್ಮಾ(ಪ್ರ), ವಿವೇಕಾನಂದ ಪಿಯುಸಿ ವಿದ್ಯಾರ್ಥಿನಿ ದೀಪ್ತಿ ಪ್ರಭು(ದ್ವಿ), ತೆಂಕಿಲ ನರೇಂದ್ರ ಪಿ.ಯುಸಿ ವಿದ್ಯಾರ್ಥಿನಿ ಶಮಾ ಕೆ.ಜೆ.(ತೃ) ಮತ್ತು ನರೇಂದ್ರ ಪಿಯುಸಿ ವಿದ್ಯಾರ್ಥಿನಿ ಆಕಾಂಕ್ಷಾ (ಪ್ರೋತ್ಸಾಹಕ).
ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ನೆಹರೂನಗರ ವಿವೇಕಾನಂದ ಪದವಿ ಕಾಲೇಜು ವಿದ್ಯಾರ್ಥಿನಿ ಸ್ವಾತಿ ಎಂ.(ಪ್ರ), ದರ್ಬೆ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿನಿ ಲಹರಿ ಎಚ್. ಆಚಾರ್ಯ(ದ್ವಿ), ದರ್ಬೆ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿನಿ ಅಪೂರ್ವ ಜಿ., (ತೃ)., ವಿವೇಕಾನಂದ ಪದವಿ ಕಾಲೇಜು ವಿದ್ಯಾರ್ಥಿನಿ ಕೀರ್ತಿ ಕುಡ್ವ(ಪ್ರೋತ್ಸಾಹಕ).
ವೃತ್ತಪರ ವಿಭಾಗದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿನಿ ಗಾಯತ್ರಿ (ಪ್ರ), ನೆಹರೂನಗರ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿನಿ ಶ್ರೀಮಾನಸ(ದ್ವಿ), ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿ ಚರಣ್ ಎ.(ತೃ), ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿನಿ ಮೈತ್ರಿ ಮತ್ತು ಎಚ್.ಪಿ.ಆರ್. ಕಾಲೇಜು ಪುತ್ತೂರು ಇಲ್ಲಿನ ವಿದ್ಯಾರ್ಥಿನಿ ಧನ್ಯಾ ಎ.(ಪ್ರೋತ್ಸಾಹಕ) ಬಹುಮಾನವನ್ನು ಪಡೆದುಕೊಂಡಿರುತ್ತಾರೆ.
ಸಾರ್ವಜನಿಕ ವಿಭಾಗದಲ್ಲಿ ಸಾನ್ವಿ ಕಜೆ(ಪ್ರ), ಶ್ರೀಮತಿ ಪೂಜಾ ಭಾವನಾ ಪ್ರಭು(ದ್ವಿ), ಲಿಖಿತಾ (ತೃ) ಮತ್ತು ಶ್ರೀಮತಿ ನಮಿತಾ ಕೆ.ಕೆ.(ಪ್ರೋತ್ಸಾಹಕ) ಬಹುಮಾನವನ್ನು ಪಡೆದುಕೊಂಡಿರುತ್ತಾರೆ.
ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪದವಿ ಪೂರ್ವ ವಿಭಾಗದಲ್ಲಿ ವಿವೇಕಾನಂದ ಪಿಯುಸಿ ವಿದ್ಯಾರ್ಥಿನಿ ಅವನಿ ಕೆ.(ಪ್ರ), ವಿವೇಕಾನಂದ ಪಿಯುಸಿ ವಿದ್ಯಾರ್ಥಿನಿ ಸುಶ್ಮಿತಾ ಬಿ.ಆರ್.(ದ್ವಿ), ಕೆ.ಪಿ.ಎಸ್.ಇ ಕಾಲೇಜು ಕುಂಬ್ರ ಇಲ್ಲಿನ ವಿದ್ಯಾರ್ಥಿನಿ ಆಯಿಷತ್ ಮಝೀನಾ(ತೃ), ಕುಂಬ್ರ ಕೆ.ಪಿ.ಎಸ್.ಸಿ ಇಲ್ಲಿನ ವಿದ್ಯಾರ್ಥಿನಿ ಖದೀಝತ್ ಸಫ್ರೀನಾ(ಪ್ರೋತ್ಸಾಹಕ) ಬಹುಮಾನವನ್ನು ಪಡೆದುಕೊಂಡಿರುತ್ತಾರೆ.
ಪದವಿ ಮತ್ತು ಸ್ನಾತಕೋತ್ತರ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿನಿ ಶ್ರೀದೇವಿ(ಪ್ರ), ವಿವೇಕಾನಂದ ಪದವಿ ಕಾಲೇಜು ವಿದ್ಯಾರ್ಥಿ ಅರುಣ್ ಕಿರಿಮಂಜೇಶ್ವರ(ದ್ವಿ), ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿನಿ ಚೈತ್ರ(ತೃ), ಸವಣೂರು ವಿದ್ಯಾರಶ್ಮಿ ಕಾಲೇಜು ವಿದ್ಯಾರ್ಥಿನಿ ಅನನ್ಯ ವಿ.ವಿ.(ಪ್ರೋತ್ಸಾಹಕ) ಬಹುಮಾನ ಪಡೆದುಕೊಂಡಿರುತ್ತಾರೆ
ವೃತ್ತಿಪರ ವಿಭಾಗದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಸೂರ್ಯ ಪಿ.(ಪ್ರ), ನೆಲ್ಲಿಕಟ್ಟೆ ಎಚ್.ಪಿ.ಆರ್ ಕಾಲೇಜು ವಿದ್ಯಾರ್ಥಿನಿ ವಿದ್ಯಾಶ್ರೀ(ದ್ವಿ), ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿ ಕಾರ್ತಿಕ್ ಪಿ.ಎಸ್.(ತೃ) ಮತ್ತು ಎಚ್.ಪಿ.ಆರ್. ಕಾಲೇಜು ಪುತ್ತೂರು ಇಲ್ಲಿನ ವಿದ್ಯಾರ್ಥಿ ಪಿ. ಮುಝಮಿಲ್(ಪ್ರೋತ್ಸಾಹಕ) ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ.