ಧವಲತ್ರಯ ಜೈನಕಾಶಿ ಟ್ರಸ್ಟ್ ಹಾಗೂ ಶ್ರೀ ಜೈನ ಮಠ ಮೂಡಬಿದ್ರೆ ಹಾಗೂ ರಮಾರಾಣಿ ಶೋಧ ಸಂಸ್ಥಾನ ಇವರ ಜಂಟಿ ಆಶ್ರಯದಲ್ಲಿ ಪ್ರಾಕೃತ ಕಲಿಕಾ ಕಾರ್ಯಾಗಾರ – ಕಹಳೆ ನ್ಯೂಸ್
ಮೂಡಬಿದಿರೆ: ಧವಲತ್ರಯ ಜೈನಕಾಶಿ ಟ್ರಸ್ಟ್ ಹಾಗೂ ಶ್ರೀ ಜೈನ ಮಠ ಮೂಡಬಿದ್ರೆ ಹಾಗೂ ರಮಾರಾಣಿ ಶೋಧ ಸಂಸ್ಥಾನ ಇವರ ಜಂಟಿ ಆಶ್ರಯದಲ್ಲಿ ಒಂದು ದಿನದ ಪ್ರಾಕೃತ ಕಲಿಕಾ ಕಾರ್ಯಾಗಾರ ಮೂಡಬಿದ್ರೆಯ ಸ್ವಸ್ತಿಶ್ರೀ ಭಟ್ಟಾರಕ ಸಭಾಭವನದಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಬಳಿಕ ಆಶೀರ್ವಚನ ನೀಡಿದ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಉತ್ತರ ಭಾರತದ ಎಲ್ಲಾ ಭಾಷೆಗಳಿಗೂ ಪ್ರಾಕೃತ ಭಾಷೆ ತಾಯಿ ಭಾಷೆಯಾಗಿದೆ. ಅರ್ಧ ಮಾಗದಿ ಅಪ ಭ್ರಂಶ, ಮಾಗದಿ, ಶೌರಸೇನಿ, ಪ್ರಾಕೃತ, ಪೈಶಾಚಿ ಮೊದಲಾದ ಪ್ರಾಕೃತ ಭಾಷೆ ಬೇದಗಳಿದ್ದು ಇವು ಜನ ಸಾಮಾನ್ಯರ ಆಡು ಭಾಷೆ ವಿದ್ವಾಂಸರ ಸಾಹಿತ್ಯ ಭಾಷೆಯಾಗಿ ಭಾರತದ ಧರ್ಮ ಹಾಗೂ ಸಾಹಿತ್ಯಕ್ಕೆ ಬಹುದೊಡ್ಡ ಕಾಣಿಕೆ ನೀಡಿ ಸಂಸ್ಕøತ ವನ್ನು ಬೆಳೆಸಲು ಕಾರಣ ವಾಗಿದೆ ಸರ್ವರೊ ಭಾರತೀಯ ಭಾಷೆ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡೆಯಬೇಕು ಎಂದು ನುಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮೂಡಬಿದ್ರೆ ಎಂಸಿಎಸ್ ಬ್ಯಾಂಕಿನ ಅಧ್ಯಕ್ಷರು ಸ್ವಸ್ತಿಶ್ರೀ ವಸತಿ ಪದವಿ ಪೂರ್ವ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರು ಹಾಗೂ ಖ್ಯಾತ ನ್ಯಾಯವಾದಿಗಳಾದ ಬಾಹುಬಲಿ ಪ್ರಸಾದ್ ಅವರು ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಪ್ರಾಕೃತ ಭಾಷೆಭಾರತದ ಪ್ರಾಚೀನ ಭಾಷೆ ಅದರ ಉಳಿವಿಗಾಗಿ ಮಠ ಮಾನ್ಯಗಳು ನಡೆಸುವ ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಸರ್ವರೂ ಸಹಕಾರ ಕೊಡಲಿ ಎಂದು ತಿಳಿಸಿ, ಸ್ವಸ್ತಿಶ್ರೀ ವಸತಿ ಪದವಿ ಪೂರ್ವ ಕಾಲೇಜಿನ 2021- 22ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣ ಗೊಂಡು ಅತಿಹೆಚ್ಚು ಅಂಕಗಳಿಸಿದ ಅಭಿಜ್ಞಾ (566ಅಂಕ)ರಿಗೆ ನಗದು ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಕಮ್ಮಟದ ಸಂಚಾಲಕರಾದ ಶ್ರೀ ಉಮಾನಾಥ್ ಶೆನೈ , ಹಿರಿಯ ಸಂಶೋಧಕರು ಪುತ್ತೂರು, ಪ್ರಾಕೃತ ಸ್ತುತಿಯ ಬಗ್ಗೆ ಪಾಠ ಮಾಡಿದರು.
ಪೆÇ್ರ ಅಜಿತ್ ಪ್ರಸಾದ್ ಪ್ರಾಕೃತ ಗಧ್ಯ ಸಾಹಿತ್ಯವು ಭಾರತೀಯ ಕಥಾ ಸಾಹಿತ್ಯಕ್ಕೆ ಶ್ರೇಷ್ಠ ಕೊಡುಗೆ ಎಂದು ತಿಳಿಸಿ ವಡ್ಡರಾಧನೆ ಕಥೆ ಬಗ್ಗೆ ಮನ ಮುಟ್ಟುವಂತೆ ವಿವರಿಸಿದರು. ಡಾ ಎಸ್ ಪಿ ವಿದ್ಯಾ ಕುಮಾರ್, ಅಭಿಜ್ಞಾ,ಎಸ್ ಡಿ ಯಂ ಕಾಲೇಜು ಉಪನ್ಯಾಸಕಿ, ಪ್ರಾಕೃತ ವ್ಯಾಕರಣ ಬಗ್ಗೆ ತಿಳಿಸಿದರು.
ವೇದಿಕೆಯಲ್ಲಿ ಶ್ರೀ ದಿನೇಶ್, ಬೆಟ್ಕೇರಿ ಆದರ್ಶ್ ಅರಮನೆ , ಶ್ರೀ ಪುಂಡಿ ಕಾಯಿ ಗಣಪತಿ ಭಟ್ಟ ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಸ್ವಸ್ತಿಶ್ರೀ ಜೈನ ವಸತಿ ಪ ಪೂ. ಕಾಲೇಜು ಹಾಗೂ ಎಸ್ ಡಿ ಎಂ ಕಾಲೇಜು ಉಜಿರೆ ಇಲ್ಲಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಉಪಸ್ಥಿತರಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಕೊನೆಯಲ್ಲಿ ಶ್ವೇತಾ ಜೈನ್ ವಕೀಲರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ನೆರವೇರಿತು.
ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ವಿದ್ಯಾರ್ಥಿ ಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸೌಮ್ಯಶ್ರೀ ಕಾರ್ಯಕ್ರಮ ನಿರ್ವಹಿಸಿ, ಉಪನ್ಯಾಸಕಿ ವೇದಾವತಿ ಇವರು ಧನ್ಯವಾದವಿತ್ತರು.