Saturday, November 23, 2024
ಉಡುಪಿದಕ್ಷಿಣ ಕನ್ನಡ

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಳಿಯಲ್ಲಿ ಬೆಲೆ ಕುಸಿತ – ಕಹಳೆ ನ್ಯೂಸ್

ಮಂಗಳೂರು : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ 10 ದಿನಗಳ ಹಿಂದೆ ಗಗನಕ್ಕೇರಿದ್ದ ಕೋಳಿ ಮಾಂಸ ಹಾಗೂ ಮೊಟ್ಟೆ ದರ ಭಾರಿ ಇಳಿಕೆ ಕಂಡಿದ್ದು, ಮಾಂಸ ಪ್ರಿಯರು ಖುಷಿ ಪಡುವಂತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

10 ದಿನಗಳ ಹಿಂದೆ ಮಾರುಕಟ್ಟೆಯಲ್ಲಿ ಬ್ರಾಯ್ಲರ್ ಕೋಳಿ ಮಾಂಸ ಸ್ಕಿನ್ ಲೆಸ್ ಕೆಜಿಗೆ 240 ರೂ. ಇತ್ತು. ವಿತ್ ಸ್ಕಿನ್ ಕೆ.ಜಿ.ಗೆ 220 ರೂ. ಹಾಗೂ ಜೀವಂತ ಕೋಳಿ 180 ರೂ. ವರೆಗೆ ಇತ್ತು.

ಜು. 24ರಂದು ಸ್ಕಿನ್ ಲೆಸ್ ಕೆಜಿಗೆ 155 ರೂ. ಇದ್ದರೆ ವಿತ್ ಸ್ಕಿನ್ 135 ರೂ. ಆಸುಪಾಸಿನಲ್ಲಿದೆ. ಇನ್ನು 6.50 ರೂ.ಗೆ ಮಾರಾಟವಾಗುತ್ತಿದ್ದ ಮೊಟ್ಟೆ ದರವೂ ಇಳಿದಿದ್ದು 5.50 ರೂ.ಗೆ ಇಳಿದಿದೆ. ಈ ವಾರದಲ್ಲಿ ಮತ್ತಷ್ಟು ಕುಸಿಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.