ವೈದ್ಯಕೀಯ ಕಾಲೇಜಿನ ಹಗರಣ ಪ್ರಕರಣ – ಬಿಷಪ್ ಮತ್ತು ಚರ್ಚ್‌ನ ಮುಖ್ಯಸ್ಥರ ಭ್ರಷ್ಟಾಚಾರ ; ಎಂಎಂ ಸಿಎಸ್‌ಐ ಚರ್ಚ್ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ – ಕಹಳೆ ನ್ಯೂಸ್
ತಿರುವನಂತಪುರಂ,ಜು 25 : ಕಾರಕೋಣಂ ವೈದ್ಯಕೀಯ ಕಾಲೇಜಿನ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವನಂತಪುರಂನಲ್ಲಿರುವ ಎಂಎಂ ಸಿಎಸ್‌ಐ ಚರ್ಚ್ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ.
ಸಿಎಸ್‌ಐನ ಪ್ರಧಾನ ಕಚೇರಿಯ ಮೇಲೆ, ಚರ್ಚ್‌ನ ಕಾರ್ಯದರ್ಶಿ ಟಿ.ಟಿ.ಪ್ರವೀಣ್ ಮತ್ತು ಕಾರಕೋಣಂ ಸಿಎಸ್‌ಐ ವೈದ್ಯಕೀಯ ಕಾಲೇಜಿನ ವೈದ್ಯಕೀಯ ನಿರ್ದೇಶಕ ಡಾ.ಬೆನೆಟ್ ಅಬ್ರಹಾಂ ಅವರ ನಿವಾಸಗಳ ಮೇಲೂ ಏಕಕಾಲದಲ್ಲಿ ದಾಳಿ ನಡೆಸಲಾಯಿತು.ವೈದ್ಯಕೀಯ ಕಾಲೇಜಿಗೆ ಪ್ರವೇಶ ನೀಡುವ ನೆಪದಲ್ಲಿ ಅಪಾರ ಪ್ರಮಾಣದ ಹಣ ವಸೂಲಿ ಮಾಡಿರುವ ಆರೋಪ ಕೇಳಿಬಂದಿದ್ದು, ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ.ಇನ್ನು ವೈದ್ಯಕೀಯ ಕಾಲೇಜಿನಲ್ಲಿ ಹಗರಣಗಳು ನಡೆಯುತ್ತಿದೆ ಎಂದು ಕೇರಳದ ಎರಡು ಪೊಲೀಸ್ ಠಾಣೆಗಳಲ್ಲಿ ಹಲವಾರು ದೂರುಗಳು ದಾಖಲಾಗಿದ್ದು, ಇದೀಗ ಭ್ರಷ್ಟಾಚಾರ ಪ್ರಕರಣದಲ್ಲಿ ನ್ಯಾಯಾಲಯವು ಬಿಷಪ್ ಮತ್ತು ಚರ್ಚ್‌ನ ಮುಖ್ಯಸ್ಥರಾಗಿರುವ ಇತರರ ಮೇಲೆ ದಾಳಿ ನಡೆಸಲು ಮುಂದಾಗಿದೆ.