ಶ್ರೀಧಾಮ ಮಾಣಿಲದಲ್ಲಿ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ನೇತೃತ್ವದಲ್ಲಿ ಆಗಸ್ಟ್ 4ರಂದು ಬಾಲಭೋಜನ ಸಮಾರೋಪ – ಆಗಸ್ಟ್ 5ರಂದು ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ – ಕಹಳೆ ನ್ಯೂಸ್
ವಿಟ್ಲ, ಜು 24 : ಬಂಟ್ವಾಳ ತಾಲೂಕಿನ ವಿಟ್ಲ ವ್ಯಾಪ್ತಿಗೊಳಪಟ್ಟ ಶ್ರೀ ಕ್ಷೇತ್ರ ಶ್ರೀಧಾಮ ಮಾಣಿಲದಲ್ಲಿ ಆಗಸ್ಟ್ 5ರಂದು ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ನಡೆಯಲಿದೆ ಎಂದು ಶ್ರೀ ಶ್ರೀ ಮೋಹನದಾಸ ಸ್ವಾಮೀಜಿಗಳು ತಿಳಿಸಿದ್ದಾರೆ.
ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಪ್ರಯುಕ್ತ 48 ದಿನಗಳ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ, ಕುಂಕುಮಾರ್ಚನೆ, ಬಾಲ ಭೋಜನ ಸೇರಿದಂತೆ ಹಲವು ಧಾರ್ಮಿಕ ಕಾರ್ಯಗಳನ್ನು ನಡೆಸಲಾಗುತ್ತಿದೆ. ನಿತ್ಯ ನೂರಾರು ಮಾತೆಯರು, ಮಕ್ಕಳು ಈ ಧಾರ್ಮಿಕ ವಿಧಿಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಅವಧಿಯಲ್ಲಿ ಶ್ರೀಗಳು ಕ್ಷೇತ್ರದಲ್ಲೇ ಉಳಿದುಕೊಂಡು ಪೂಜೆ ಪುನಸ್ಕಾರಗಳನ್ನು ನಡೆಸುತ್ತಿದ್ದಾರೆ.ಆಗಸ್ಟ್ 4ರಂದು ಬಾಲಭೋಜನ ಸಮಾರೋಪ ಕಾರ್ಯಕ್ರಮ ನಡೆಯಲಿದೆ.
ವಿಜೃಂಭನೆಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಲೋಕ ಕಲ್ಯಾಣಾರ್ಥವಾಗಿ ನಿತ್ಯ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತಿದ್ದು, ಮಹಾ ತಾಯಿ ಮಹಾಲಕ್ಷ್ಮೀ ದೇಶದಲ್ಲಿ ಸೌಹಾರ್ದ ಶಾಂತಿ ಕರುಣಿಸಲಿ ಎಂದು ಪ್ರಾರ್ಥನೆ ನೆರವೇರಿಸಲಾಗುತ್ತಿದೆ ಎಂದು ಶ್ರೀ ಶ್ರೀ ಮೋಹನದಾಸ್ ಸ್ವಾಮೀಜಿ ತಿಳಿಸಿದ್ದಾರೆ.