ಕಾರ್ಕಳ: ಇಲ್ಲಿನ ತಾಲೂಕು ಕಚೇರಿಯ ಸರ್ಕಾರಿ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ನಡೆದಿದೆ.
ಸುಶ್ಮಿತಾ (24) ಆತ್ಮಹತ್ಯೆ ಮಾಡಿಕೊಂಡ ಯುವತಿ. ಘಟನೆ ವಿವರ ಸುಶ್ಮಿತಾ ಹುಡ್ಕೊ ಕಾಲನಿ ನಿವಾಸಿಯಾಗಿದ್ದರು. ನಿನ್ನೆ ಮನೆ ಸಮೀಪದ ಬಾವಿಗೆ ಹಾರಿ ಸಾವಿಗೆ ಶರಣಾಗಿದ್ದಾರೆ. ತಮ್ಮ ಪ್ರತಿಭೆಯ ಆಧಾರದಲ್ಲಿ ಸರಕಾರಿ ನೌಕರಿ ಪಡೆದುಕೊಂಡಿದ್ದ ಈಕೆ ಕಚೇರಿಯಲ್ಲಿ ಉತ್ತಮ ಸಿಬ್ಬಂದಿ ಎಂಬ ಹೆಸರು ಸಂಪಾದಿಸಿದ್ದರು. ತಂದೆ, ತಾಯಿ, ಓರ್ವ ಸಹೋದರಿಯನ್ನು ಅಗಲಿದ್ದಾರೆ. ಆತ್ಮಹತ್ಯೆಯ ನಿಖರ ಕಾರಣ ತಿಳಿದುಬಂದಿಲ್ಲ.