Recent Posts

Sunday, January 19, 2025
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಆಗಸ್ಟ್ 19ರಂದು ಶ್ರೀಚಕ್ರ ಪೂಜೆ: ಆಮಂತ್ರಣ ಪತ್ರಿಕೆ ಬಿಡುಗಡೆ- ಕಹಳೆ ನ್ಯೂಸ್

ಬಂಟ್ವಾಳ : ಕೆದಿಲ ಗ್ರಾಮದ ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಆಗಸ್ಟ್ 19ರಂದು ಶ್ರೀಚಕ್ರ ಪೂಜೆ ನಡೆಯಲಿದೆ. ಈ ಪ್ರಯುಕ್ತ ನಿನ್ನೆ ಕ್ಷೇತ್ರದಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಗಿದೆ. ಶ್ರೀ ದೇವರ ಪೂಜಾ ಸಂದರ್ಭದಲ್ಲಿ ದೇವರ ಮುಂದೆ ಆಮಂತ್ರಣ ಪತ್ರಿಕೆ ಇಟ್ಟು ಗ್ರಾಮದ ಸಮಸ್ತರ ಸಮ್ಮುಖದಲ್ಲಿ ವಿಶೇಷವಾಗಿ ಅರ್ಚಕರು ಪ್ರಾರ್ಥಿಸಿದರು. ಬಳಿಕ ಪುಂಜತೋಡಿ ರಾಮಕೃಷ್ಣ ಭಟ್ಟರು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಜಯಂತಿ. ಡಿ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಅರ್ಚಕರಾದ ಶಾಮ್ ನಾರಾಯಣ್, ಜೆ ಶಂಕರಭಟ್ಟರು, ಗ್ರಾಮದ ಹಿರಿಯರಾದ ಗೋಪಾಲಕೃಷ್ಣ ಭಟ್ ಒಳಂಗ ಜೆ ಶ್ರೀಚಕ್ರ ಪೂಜೆ ಸಮಿತಿಯ ಅಧ್ಯಕ್ಷರಾದ ರಘು ಅಜಿಲ ಮಿತ್ತಿಲ ಗ್ರಾಮದ ಸಂಘ ಸಂಸ್ಥೆಗಳಾದ ಶ್ರೀ ಉಳ್ಳಾಕುಲು ಧೂಮಾವತಿ ದೈವಸ್ಥಾನದ ಸದಸ್ಯರು, ಶ್ರೀ ದೇವಿ ಭಜನಾ ಮಂಡಳಿ ಸದಸ್ಯರು, ಶ್ರೀರಾಮ ಭಜನಾ ಮಂಡಳಿ ಸದಸ್ಯರು, ಶ್ರೀಕೃಷ್ಣ ಭಜನಾ ಮಂಡಳಿ ಸದಸ್ಯರು, ಯುವ ಕೇಸರಿ ಗಡಿಯಾರ ಇದರ ಸದಸ್ಯರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಉಪಸ್ಥಿತರಿದ್ದರು.
ಈ ವೇಳೆ ನಡೆದ ಸಭೆಯಲ್ಲಿ ಶ್ರೀಚಕ್ರ ಪೂಜಾ ವ್ಯವಸ್ಥೆಯ ದೃಷ್ಟಿಯಿಂದ ವಿವಿಧ ಸಮಿತಿಗಳನ್ನು ರಚಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು