Recent Posts

Monday, January 20, 2025
ಉಡುಪಿ

ಉಡುಪಿ : ಸಂತೆಕಟ್ಟೆಯ ಮಮತೆಯ ತೊಟ್ಟಿಲು ಕೃಷ್ಣಾನುಗ್ರಹಕ್ಕೆ ಭೇಟಿ ನೀಡಿ ಸಹಾಯಧನದ ಚೆಕ್ ಹಸ್ತಾಂತರಿಸಿದ ಬ್ರಹ್ಮಗಿರಿ ಲಯನ್ಸ್ ಕ್ಲಬ್ ನ ಸದಸ್ಯರು – ಕಹಳೆ ನ್ಯೂಸ್

ಉಡುಪಿ : ಸಂತೆಕಟ್ಟೆಯ ಮಮತೆಯ ತೊಟ್ಟಿಲು ಕೃಷ್ಣಾನುಗ್ರಹಕ್ಕೆ ಭೇಟಿ ನೀಡಿ ಸಹಾಯಧನದ ಚೆಕ್ ಹಸ್ತಾಂತರಿಸಿದ ಬ್ರಹ್ಮಗಿರಿ ಲಯನ್ಸ್ ಕ್ಲಬ್ ನ ಸದಸ್ಯರು – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿ : ಲಯನ್ಸ್ ಕ್ಲಬ್ ಬ್ರಹ್ಮಗಿರಿಯ ಲಯನ್ಸ್ ಮತ್ತು ಲಿಯೋ ಸದಸ್ಯರು ಸಂತೆಕಟ್ಟೆಯ ಮಮತೆಯ ತೊಟ್ಟಿಲು ಕೃಷ್ಣಾನುಗ್ರಹಕ್ಕೆ ಭೇಟಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕೃಷ್ಣಾನುಗ್ರಹದ ಮಕ್ಕಳ ದಿನನಿತ್ಯದ ಉಪಯೋಗಕ್ಕಾಗಿ ದಿನಸು ಹಾಗೂ ಧನಸಹಾಯದ ರೂಪದಲ್ಲಿ ಕ್ಲಬ್ಬಿನ ವತಿಯಿಂದ ಚೆಕ್ಕನ್ನು ಹಸ್ತಾಂತರಿಸಲಾಯಿತು.
ಈ ಸಮಯದಲ್ಲಿ ಲಿಯೋ ಅಧ್ಯಕ್ಷರಾದ ಲಿಯೋ ಅನಿತಾ ರೈ ಮಕ್ಕಳಿಗೆ ಕೇಕ್ ತಿನ್ನಿಸುವ ಮುಖಾಂತರ ಕ್ಲಬ್ಬಿನ 2022-23 ನೇ ಸಾಲಿನ ಲಿಯೊ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕ್ಲಬ್ಬಿನ ಕಾರ್ಯದರ್ಶಿ ಲಯನ್ ಗೀತಾ ರಾವ್ ಸ್ವಾಗತಿಸಿ ಕಾರ್ಯಕ್ರಮದ ಕೊನೆಗೆ ಧನ್ಯವಾದ ಅರ್ಪಿಸಿದರು. ಪ್ರಾಂತ್ಯದ ಅಧ್ಯಕ್ಷರಾದ ಹರಿಪ್ರಸಾದ್ ರೈ, ಕೃಷ್ಣಾನುಗ್ರಹದ ಟ್ರಸ್ಟಿಗಳಾದ ಡಾಕ್ಟರ್ ಲಯನ್ ಉಮೇಶ್ ಪ್ರಭು ಹಾಗೂ ಉದಯ್ ಕುಮಾರ್, ಗೌತಮಿ, ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಉಮೇಶ್ ನಾಯಕ್, ಜಿಲ್ಲಾ ಲಯನ್ ಕಾರ್ಡಿನೇಟರ್ ಲಯನ್ ವಾದಿರಾಜ ರಾವ್, ಖಜಾಂಚಿ ಲಯನ್ ವಿಜೇತರೈ, ಸದಸ್ಯರಾದ ಲಯನ್ ಶೈಲಾ ನಾಯಕ್, ಲಿಯೋ ಕ್ಲಬ್ಬಿನ ಖಜಾಂಚಿ ಲಿಯೋ ಶ್ರೀನಿಧಿ ರಾವ್ ಉಪಸ್ಥಿತರಿದ್ದರು.