Monday, November 25, 2024
ಸುದ್ದಿ

‘ನಾಲ್ಕು ಚಕ್ರದ ವಾಹನ’ ಹೊಂದಿರುವವರಿಗೆ ಬಿಗ್ ಶಾಕ್: ‘ಬಿಪಿಎಲ್ ಕಾರ್ಡ್’ ಹೊಂದಿದ್ರೇ ದಂಡ ಫಿಕ್ಸ್ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರು: ಬಿಪಿಎಲ್ ಕಾರ್ಡ್ ಅಕ್ರಮವನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇದೀಗ ನಾಲ್ಕು ಚಕ್ರ ವಾಹನಗಳನ್ನು ಹೊಂದಿರುವಂತ ಬಿಪಿಎಲ್ ಪಡಿತರ ಚೀಟಿದಾರರ ಮಾಹಿತಿಯನ್ನು ಕಲೆ ಹಾಕುತ್ತಿದ್ದು, ಅಂತಹ ವ್ಯಕ್ತಿಗಳಿಗೆ ದಂಡವನ್ನು ಹಾಕೋದಕ್ಕಾಗಿ ಪಟ್ಟಿಯನ್ನು ತಯಾರಿಸುತ್ತಿದೆ ಎಂಬುದಾಗಿ ಹೇಳಲಾಗುತ್ತಿದೆ.

ಈ ಮೂಲಕ ನಾಲ್ಕು ಚಕ್ರಗಳ ವಾಹನ ಹೊಂದಿ, ಅಂತ್ಯೋದಯ ಆಹಾರ ಪಡಿತರ ಕಾರ್ಡ್ ಹೊಂದಿರೋರಿಗೆ ಶಾಕ್ ನೀಡೋದಕ್ಕೆ ಮುಂದಾಗಿದೆ.

ನಾಲ್ಕು ಚಕ್ರ ಹೊಂದಿರುವಂತ ರಾಜ್ಯದ 12,584 ಪಡಿತರ ಚೀಟಿದಾರರಿಗೆ ಸರ್ಕಾರ ದಂಡ ಪಾವತಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಈ ಹಿಂದೆ ನಾಲ್ಕು ಚಕ್ರದ ವಾಹನ ಹೊಂದಿದ್ದಂತ ಈ ಪಡಿತರಚೀಟಿದಾರರಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ಹಿಂದಿರುಗಿಸದ ಕಾರಣ, ಇದೀಗ ಸರ್ಕಾರ ದಂಡದ ಅಸ್ತ್ರವನ್ನು ಪ್ರಯೋಗಿಸಿದೆ ಎನ್ನಲಾಗುತ್ತಿದೆ.
ಅಂದಹಾಗೇ ರಾಜ್ಯ ಸರ್ಕಾರವು ಸೆಪ್ಟೆಂಬರ್ 3, 2019ರೊಳಗೆ ನಾಲ್ಕು ಚಕ್ರಗಳ ವಾಹನ ಹೊಂದಿರುವವರು ಅಂತ್ಯೋದಯ, ಬಿಪಿಎಲ್ ಚೀಟಿ ಹೊಂದಿದ್ದರೇ ವಾಪಾಸ್ ನೀಡುವಂತೆ ಸೂಚಿಸಲಾಗಿತ್ತು. ಆ ಬಳಿಕ ಅವಧಿಯನ್ನು ವಿಸ್ತರಣೆ ಕೂಡ ಮಾಡಲಾಗಿತ್ತು. ಆದ್ರೇ.. ಹೀಗಿದ್ದೂ ಯಾವುದೇ ನಾಲ್ಕು ಚಕ್ರ ಹೊಂದಿರುವಂತ ಪಡಿತರ ಚೀಟಿದಾರರು ಕಾರ್ಡ್ ಸರೆಂಡರ್ ಮಾಡಿರಲಿಲ್ಲ.

ಈ ಹಿನ್ನಲೆಯಲ್ಲಿಯೇ ಇದೀಗ ರಾಜ್ಯ ಸರ್ಕಾರದಿಂದ ರಾಜ್ಯಾಧ್ಯಂತ ನಾಲ್ಕು ಚಕ್ರಗಳ ವಾಹನ ಹೊಂದಿರುವಂತ ಅಂತ್ಯೋದಯ, ಬಿಪಿಎಲ್ ಕಾರ್ಡ್ ದಾರರಿಗೆ ನೋಟಿಸ್ ನೀಡಿದೆ. ನೋಟಿಸ್ ತಲುಪಿದ 3 ದಿನಗಳ ಒಳಗೆ ಕಾರ್ಡ್ ದಾರರು ತಾಲೂಕು ಕಚೇರಿಯ ಆಹಾರ ವಿಭಾಗಕ್ಕೆ ಹಾಜರಾಗಿ, ದಂಡದ ಮೊತ್ತವನ್ನು ಪಾವತಿಸುವಂತೆ ಸೂಚಿಸಲಾಗಿದೆ. ದಂಡದ ಮೊತ್ತವನ್ನು ಮಾರುಕಟ್ಟೆ ದರಕ್ಕೆ ಅನುಗುಣವಾಗಿ ವಿಧಿಸಲಾಗಿದೆ. ಈ ದಂಡ ಕಟ್ಟಿದ ಬಳಿಕ ಅಂತ್ಯೋದಯ, ಬಿಪಿಎಲ್ ಕಾರ್ಡ್ ಅನ್ನು ಎಪಿಎಲ್ ಆಗಿ ಪರಿವರ್ತಿಸಲಾಗುತ್ತದೆ.