Monday, January 20, 2025
ಸುದ್ದಿ

ಉಡುಪಿಯಲ್ಲಿ ಸೌಂಡು ಮಾಡಿದ ಬೃಹತ್ ಗಾತ್ರದ ಎರಡು ಮೀನುಗಳು – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿ: ಮೀನುಗಾರಿಕೆಗೆ ತೆರಳಿದ್ದ ಮೀನುಗಾರನ ಗಾಳಕ್ಕೆ ಬೃಹತ್ ಗಾತ್ರದ ಎರಡು ಮೀನುಗಳು ಬಿದ್ದಿರುವ ಅಪರೂಪದ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ.

ಕೇಬಲ್ ಆಪರೇಟರ್ ವೃತ್ತಿ ಮಾಡುತ್ತಿರುವ ನಾಗೇಶ್ ಉದ್ಯಾವರ ಅವರು, ದೋಣಿಯಲ್ಲಿ ಹೋಗಿ ಮೀನು ಹಿಡಿಯುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ.

ಅದರಂತೆ ಅವರು ಮಲ್ಪೆ ಕಡಲಲ್ಲಿ ಸ್ನೇಹಿತರ ಜೊತೆಗೆ ಹೋಗಿ ಗಾಳ ಹಾಕುವ ಕಾಯಕದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಬೃಹತ್ ಗಾತ್ರದ ಎರಡು ಮೀನುಗಳು ಗಾಳಕ್ಕೆ ಬಿದ್ದಿವೆ.

25 ಕೇಜಿ ತೂಕದ ಮುರು ಮೀನು, ಹಾಗೂ 15 ಕೇಜಿ ತೂಕದ ಕೊಕ್ಕರ್ ಮೀನು ಇದಾಗಿದ್ದು, ಮಾರುಕಟ್ಟೆಯಲ್ಲಿ ಸಾವಿರಾರು ರೂ ಬೆಳಬಾಳುವ ಮೀನು ಇದಾಗಿದೆ ಎಂದು ಅವರು ತಿಳಿಸಿದ್ದಾರೆ.