ಮಾಸ್ಕೋ: ಇತ್ತೀಚೆಗೆ ನಡೆದ ಮಾಸ್ಕೋ ಚೆಸ್ ಓಪನ್ ಪಂದ್ಯಾವಳಿಯಲ್ಲಿ ಚೆಸ್ ಆಡುತ್ತಿದ್ದ ರೋಬೋಟ್, ತನ್ನ ಎದುರಾಳಿ 7 ವರ್ಷದ ಮಗುವಿನ ಬೆರಳನ್ನು ಮುರಿದಿರುವ ವಿಲಕ್ಷಣ ಘಟನೆ ನಡೆದಿದೆ.
ಈ ಹಿಂದೆ ರೋಬೋಟ್ ಹಲವು ಪಂದ್ಯಾವಳಿಗಳನ್ನು ಆಡಿದ್ದು, ಯಾವುದೇ ಅವಘಡಗಳು ಸಂಭವಿಸಿಲ್ಲ. ಆದರೆ 7 ವರ್ಷದ ಮಗುವಿನ ಬೆರಳನ್ನು ಮುರಿದಿರುಗುವ ಘಟನೆ ಕೆಟ್ಟ ಬೆಳವಣಿಗೆಯಾಗಿದೆ” ಎಂದು ಮಾಸ್ಕೋ ಚೆಸ್ ಫೆಡರೇಶನ್ ಅಧ್ಯಕ್ಷ ಸೆರ್ಗೆಯ್ ಲಾಜರೆವ್ ತಿಳಿಸಿದ್ದಾರೆ.
ಚೆಸ್ ಪಂದ್ಯಾವಳಿಯ ವೇಳೆ ರೋಬೋಟ್ ನ ಕಾರ್ಯ ನಿರ್ವಹಣೆಗೆ ನಿರ್ದಿಷ್ಟ ಅವಧಿಯನ್ನು ನೀಡಲಾಗುತ್ತದೆ. ಆದರೆ ಈ ಪಂದ್ಯಾವಳಿಯಲ್ಲಿ ನಿರ್ದಿಷ್ಟ ಸಮಯವನ್ನು ನಿಗದಿ ಪಡಿಸಿರಲಿಲ್ಲ. ಹಾಗಾಗಿ ಸ್ಪರ್ಧಿಯು ರೋಬೋಟ್ ಪ್ರತಿಕ್ರಿಯೆಗೆ ಕಾಯದೇ ಆಡಲು ಮಂದಾಗಿದ್ದಾನೆ. ಈ ವೇಳೆ ರೋಬೋಟ್ ಬಾಲಕನ ಬೆರಳುಗಳನ್ನು ಮುರಿದಿದೆ. ಈ ಕುರಿತು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಆಯೋಜಕರ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.