Recent Posts

Tuesday, January 21, 2025
ಸುದ್ದಿ

ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನದ ಅಂಗವಾಗಿ ನಡೆಯುವ 12ನೇ ವರ್ಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿಗೆ ಪದಾಧಿಕಾರಿಗಳ ಆಯ್ಕೆ – ಕಹಳೆ ನ್ಯೂಸ್

ಗಾಯಕರು: ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನದ ಅಂಗವಾಗಿ ನಡೆಯುವ 12ನೇ ವರ್ಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿಗೆ ಪದಾಧಿಕಾರಿಗಳ ಆಯ್ಕೆ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು : ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪನೆಗೊಂಡ ವಿಶ್ವ ಹಿಂದೂ ಪರಿಷತ್ ಇದರ ಸ್ಥಾಪನಾ ದಿನದ ಪ್ರಯುಕ್ತ, ಪುತ್ತೂರಿನಲ್ಲಿ ಹಲವು ವರ್ಷಗಳಿಂದ ವಿಜೃಂಭಣೆಯಾಗಿ ಪುತ್ತೂರು ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮ ನಡೆಯುತ್ತದೆ. ಈ ವರ್ಷ ನಡೆಯುವ 12ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಅಧ್ಯಕ್ಷರಾಗಿ ಪಿ.ವಾಮನ ಪೈ, ಸಮಿತಿಯ ಸಂಚಾಲಕರಾಗಿ ಲಕ್ಷ್ಮಣ್ ಗೌಡ ಬೆಳ್ಳಿಪ್ಪಾಡಿ, ಸಮಿತಿಯ ಕಾರ್ಯದರ್ಶಿಯಾಗಿ ಶ್ರೀಧರ್ ತೆಂಕಿಲ, ಕೋಶಾಧಿಕಾರಿಯಾಗಿ ರೂಪೇಶ್ ಬಲ್ನಾಡ್ ಆಯ್ಕೆಯಾಗಿದ್ದಾರೆ. ಹಾಗೂ ಉಪಧ್ಯಾಕ್ಷರುಗಳಾಗಿ ಡಾ.ಸುರೇಶ್ ಪುತ್ತೂರಾಯ, ಅರುಣ್ ಕುಮಾರ್ ರೈ ಅನಾಜೆ,ಅಭಿಜೀತ್ ಕೊಡಿಪ್ಪಾಡಿ,ಯಶ್ ಕುಮಾರ್ ಮಕಾಡಿಯ, ಹರಿಣಿ ಪುತ್ತೂರಾಯ,ಶರಾವತಿ ತೆಂಕಿಲ, ಸಹ ಕಾರ್ಯದರ್ಶಿಗಳಾಗಿ ಕಿರಣ್ ಕುಮಾರ್ ರಾಮಕುಂಜ,ಅನಿಲ್ ಇರ್ದೆ ಮತ್ತು ಸಹ ಕೋಶಾಧಿಕಾರಿಗಳಾಗಿ ರವಿಕುಮಾರ್ ಕೈತ್ತಡ್ಕ,ಪ್ರವೀಣ್ ಕುಮಾರ್ ಕಲ್ಲೇಗ ಅಯ್ಕೆಯಾಗಿದ್ದಾರೆ

ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿಗೆ ಪದಾಧಿಕಾರಿಗಳ ಆಯ್ಕೆ