Tuesday, January 21, 2025
ಸುದ್ದಿ

ಮಂಗಳೂರು: TCCOH ಕರ್ನಾಟಕ ಇದರ ಪ್ರಥಮವಾರ್ಷಿಕೋತ್ಸವದ ಅಂಗವಾಗಿಆಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ- ಕಹಳೆ ನ್ಯೂಸ್

ಮಂಗಳೂರು: ಟ್ಯಾಕ್ಸಿ ಕಾಂಟ್ರಕ್ಟ್ ಕ್ಯಾರೇಜ್ ಆಪರೇಟರ್ಸ್ ಹೆಲ್ತ್‌ಲೈನ್ ಕರ್ನಾಟಕ (TCCOH) ಇದರ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಮಂಗಳೂರಿನ ಶಕ್ತಿನಗರದಲ್ಲಿರುವ ಸಾನಿಧ್ಯ ಮಾನಸಿಕ ವಿಕಲಚೇತನ ಶಾಲೆಯಲ್ಲಿ ಶಾಲೆಯ ಆಡಳಿತ ಮುಖ್ಯಸ್ಥರಾದ ಡಾ.ವಸಂತ್ ಕುಮಾರ್ ಶೆಟ್ಟಿ ಆಂಬುಲೆನ್ಸ್ ಲೋಕಾರ್ಪಣೆಗೊಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

TCCOH ನ ರಾಜ್ಯ ಗೌರವಾಧ್ಯಕ್ಷರಾದ ಸುರೇಶ್ ದೇವಾಡಿಗರವರ ಅಧ್ಯಕ್ಷತೆಯಲ್ಲಿ ನ‍‍ಡೆದ ಈ ಕಾರ್ಯಕ್ರಮದಲ್ಲಿ ಕಾವೇರಿ ಆಂಬುಲೆನ್ಸ್ ಮಾಲಕಿ ರಾಧಿಕಾ ಸಿ.ಎಸ್, ಕಮೀಷನರೇಟ್‌ನ ಸಂಚಾರ ವಿಭಾಗದ ಎಸಿಪಿ ಗೀತಾ ಡಿ ಕುಲಕರ್ಣಿ, ಸಾಮಾಜಿಕ ಕಾರ್ಯಕರ್ತ ಜಿ.ಕೆ ಭಟ್, ಕಾನೂನು ಸಲಹೆಗಾರ
ಎಮ್.ಸಚಿನ್.ದೇವೇಂದ್ರ, ಸ್ಥಳೀಯ ಕಾರ್ಪೋರೇಟರ್ ಕಿಶೋರ್ ಕೊಟ್ಟಾರಿ, ಶಿವರಾಜ್ ಕಾವೂರು, ಕಿಶೋರ್ ಎಕ್ಕೂರು, TCCOH ನ ಅಧ್ಯಕ್ಷರು ಪ್ರಭಾಕರನ್ ಕೆಪಿ, ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಸಾನಿಧ್ಯ ಮಾನಸಿಕ ವಿಕಲಚೇತನ ಶಾಲೆಯ ಮಕ್ಕಳಿಗೆ ಅಪರಾಹ್ನ ಉಪಾಹಾರವನ್ನು ನೀಡಲಾಯಿತು.

ಈ ಆಂಬುಲೆನ್ಸ್ ಸಾರ್ವಜನಿಕ ಸೇವೆಯೊಂದಿಗೆ ಸಾನಿಧ್ಯ ಸಂಸ್ಥೆಗೆ ಉಚಿತ ಸೇವೆ ನೀಡಲಿದೆ.