ಬಿಜೆಪಿ ಯುವ ನಾಯಕ ಪ್ರವೀಣ್ ಹತ್ಯೆ ಹಿನ್ನೆಲೆ ; ಬಂದ್ ಗೆ ಬೆಂಬಲಿಸಿ ಪುತ್ತೂರಿನ ವಿವೇಕಾನಂದ ಹಾಗೂ ಅಂಬಿಕಾ ವಿದ್ಯಾಸಂಸ್ಥೆಗಳಿಗೆ ರಜೆ ಘೋಷಣೆ – ಕಹಳೆ ನ್ಯೂಸ್
ಪುತ್ತೂರು : ಹಿಂದೂ ಮುಖಂಡನ ಹತ್ಯೆ ಪ್ರಕರಣ; ಹಿಂದೂ ಪರ ಸಂಘಟನೆಗಳ ಸ್ವಯಂ ಪ್ರೇರಿತ ಬಂದ್ ಗೆ ಬೆಂಬಲ ಸೂಚಿಸಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ವಿವೇಕಾನಂದ ಮತ್ತು ಅಂಬಿಕಾ ಸಂಸ್ಥೆಗಳು- ಕಹಳೆ ನ್ಯೂಸ್
ಪುತ್ತೂರು: ಬಿಜೆಪಿ ಯುವ ಮುಖಂಡ ಜಿಲ್ಲಾ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಖಂಡಿಸಿ ಹಿಂದೂ ಸಂಘಟನೆಗಳು ಕರೆ ನೀಡಿರುವ ಬಂದ್ ಗೆ ಬೆಂಬಲಿಸಿ ಪುತ್ತೂರಿನ ಅಂಬಿಕಾ ಸಮೂಹ ವಿದ್ಯಾಸಂಸ್ಥೆಗಳಿಗೆ, ವಿವೇಕಾನಂದ ವಿದ್ಯಾಸಂಸ್ಥೆಗಳಿಗೆ ರಜೆ ಘೋಷಣೆಯಾಗಿದೆ.
ಜು.27 ರಂದು ರಾತ್ರಿ ತನ್ನ ಬೆಳ್ಳಾರೆಯ ಚಿಕನ್ ಸೆಂಟರ್ ನಲ್ಲಿ ಅಂಗಡಿ ಬಂದ್ ಮಾಡುವ ವೇಳೆ ಮೂವರು ಮುಸುಕುದಾರಿಗಳು ತಲುವಾರು ದಾಳಿ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ಸ್ಥಳದಲ್ಲೇ ಪ್ರವೀಣ್ ಅಸುನೀಗಿದರು. ಬಳಿಕ ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ಮೃತದೇಹ ತರಲಾಗಿದ್ದು, ಅಲ್ಲಿ
ಜಿಲ್ಲಾಧಿಕಾರಿ ಬರುವಂತೆ ಹಿಂದೂ ಸಂಘಟನೆಗಳು
ಮಧ್ಯರಾತ್ರಿಯವರೆಗೆ ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಧಿಕಾರಿ ಆಗಮಿಸಿದ ನಂತರ ಮೃತದೇಹವನ್ನು ಪೋಸ್ಟ್ ಮಾರ್ಟಮ್ ಗೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಇದೀಗ ಪುತ್ತೂರು ಸರ್ಕಾರಿ
ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ.