Friday, January 24, 2025
ಉಡುಪಿಸುದ್ದಿ

ಅಕ್ರಮ ಜಾನುವಾರು ಸಾಗಾಟ ಮತ್ತು ಹಿಂಸೆ ಪ್ರಕರಣಗಳಲ್ಲಿ ಕೂಡಾ ಭಾಗಿಯಾಗಿದ್ದ ಕ್ರಿಮಿನಲ್‌ ಆರೋಪಿ ಅಬೂಬಕ್ಕರ್‌ನಿಗೆ ಉಡುಪಿಯಿಂದಲೇ ಗಡೀಪಾರು ಶಿಕ್ಷೆ – ಕಹಳೆ ನ್ಯೂಸ್

ಉಡುಪಿ: ಗೆಳೆಯರೊಂದಿಗೆ ಒಂದು ತಂಡ ಕಟ್ಟಿಕೊಂಡು ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಕಳವು, ಅಕ್ರಮ ಜಾನುವಾರು ಸಾಗಾಟ ಮತ್ತು ಹಿಂಸೆ ಪ್ರಕರಣಗಳಲ್ಲಿ ಕೂಡಾ ಭಾಗಿಯಾಗಿದ್ದ ಯುವಕನೋರ್ವನನ್ನು ಮತ್ತು ಆತನ ಸಹಚರರನ್ನು ಬಂಧಿಸಿದ ಘಟನೆ ಕುಂದಾಪುರದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಬೂಬಕ್ಕರ್ (43) ಬಂಧಿತ ಆರೋಪಿ.

ಕುಂದಾಪುರ ಗ್ರಾಮಾಂತರ ಠಾಣಾ ಸರಹದ್ದಿನ ಗುಲ್ವಾಡಿ ಗ್ರಾಮದ ಕಾಂಡ್ಲಗದ್‌ದೆ ವಾಸಿ ಅಬ್ದುಲ್ ಬ್ಯಾರಿ ಮಗ ಅಬೂಬಕ್ಕರ್ (43) ಬಂಧಿತ ಆರೋಪಿ.

ಈತ ತನ್ನ ಸಹಚರರೊಂದಿಗೆ ತಮ್ಮದೇ ಆದ ಒಂದು ತಂಡವನ್ನು ಕಟ್ಟಿಕೊಂಡು, ಆತನು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಹೊರ ಬಂದ ನಂತರವೂ ಕೂಡ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಭಂಗ ತಂದಿರುತ್ತಾನೆ.

ಕುಂದಾಪುರ ಗ್ರಾಮಾಂತರ ಠಾಣಾ ಸರಹದ್ದ ಕೋಮು ಸೂಕ್ಷ್ಮ ಪ್ರದೇಶವಾಗಿದ್ದು ಈ ಬಗ್ಗೆ ಮೇಲಾಧಿಕಾರಿಯವರ ಆದೇಶದಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಉಪನಿರೀಕ್ಷಕರು ದಂಡಾಧಿಕಾರಿಯವರು ಕುಂದಾಪುರ ಉಪವಿಭಾಗರವರಿಗೆ ಆತನ ವಿರುದ್ಧ ಕರ್ನಾಟಕ ಪೊಲೀಸ್ ಕಾಯಿದೆ 1963 ಅಡಿಯಲ್ಲಿ ಗಡಿಪಾರು ಕ್ರಮ ತೆಗೆದುಕೊಳ್ಳುವಂತೆ ವರದಿಯನ್ನು ಪೊಲೀಸ್ ಅಧೀಕ್ಷಕರ ಮುಖಾಂತರ ಸಲ್ಲಿಸಿರುತ್ತಾರೆ.

ಘಟನೆಯನ್ನು ಪರಿಶೀಲಿಸಿ ಉಪವಿಭಾಗದ ದಂಡಾಧಿಕಾರಿಯವರು ಕುಂದಾಪುರ ಉಪವಿಭಾಗದವರು ನಿನ್ನೆ ಅಬೂಬಕ್ಕರ್ ಎಂಬಾತನಿಗೆ 6 ತಿಂಗಳ ಕಾಲ ಗಡಿಪಾರು ಶಿಕ್ಷೆ ವಿಧಿಸಿ, ಜಮಖಂಡಿ ಉಪವಿಭಾಗಕ್ಕೆ ಗಡಿಪಾರು ಮಾಡಿ ಆದೇಶ ಹೊರಡಿಸಿರುತ್ತಾರೆ.

ಆರೋಪಿಯು 6 ತಿಂಗಳ ಒಳಗೆ ಸಂಬಂಧಪಟ್ಟ ಪ್ರಾಧಿಕಾರದ ಅನುಮತಿಯನ್ನು ಪಡೆಯದೆ ಕುಂದಾಪುರ ಪೊಲೀಸ್ ಉಪವಿಭಾಗದಲ್ಲಿ ಯಾವುದೇ ಕಾರಣಕ್ಕೂ ಕಂಡು ಬಂದಲ್ಲಿ ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕರಿಗೆ ಸದ್ರಿಯವರನ್ನು ಕರ್ನಾಟಕ ಪೊಲೀಸ್ ಕಾಯ್ದೆ ದಸ್ತಗಿರಿ ಮಾಡುವಂತೆ ಆದೇಶವನ್ನು ಹೊರಡಿಸಿದ್ದಾರೆ.