Thursday, January 23, 2025
ಸುದ್ದಿ

ಸಿಎಂ ಸೂಚನೆ ಮೇರೆಗೆ ನೆಟ್ಟಾರಿನತ್ತ ಸಚಿವ ಸುನೀಲ್‌ ಕುಮಾರ್ ದೌಡು-ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ರಾತ್ರಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರ್ ಅವರ ಮೃತದೇಹದ ಅಂತಿಮ ದರ್ಶನ ಪಡೆಯಲು ಬಿಜೆಪಿಯ ಯಾವ ಪ್ರಮುಖ ನಾಯಕರೂ ಆಗಮಿಸಲಿಲ್ಲವೆಂಬ ಆಕ್ರೋಶ ಹಿಂದೂ ಕಾರ್ಯಕರ್ತರಲ್ಲಿದ್ದು, ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಕಿಡಿ ಕಾರಿದ್ದರು.

ಇದರ ಬೆನ್ನಲ್ಲೇ ಇದೀಗ ಇಂಧನ ಸಚಿವ ಸುನೀಲ್‌ ಕುಮಾರ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸೂಚನೆಯ ಹಿನ್ನಲೆಯಲ್ಲಿ ಪ್ರವೀಣ್‌ ಅಂತಿಮ ದರ್ಶನಕ್ಕಾಗಿ ನೆಟ್ಟಾರ್‌ ಗೆ ತೆರಳುತ್ತಿದ್ದಾರೆ. ಸಚಿವರ ಇಂದಿನ ಎಲ್ಲ ಕಾರ್ಯಕ್ರಮಗಳು ರದ್ದುಗೊಂಡಿದ್ದು, ಮಂಗಳೂರಿನಿಂದ ನೇರವಾಗಿ ನೆಟ್ಟಾರ್‌ ಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

ಪ್ರವೀಣ್‌ ನೆಟ್ಟಾರ್‌ ಅವರ ಮೃತ ದೇಹದ ಮೆರವಣಿಗೆ ಈಗ ಹುಟ್ಟೂರಿನತ್ತ ಸಾಗುತ್ತಿದ್ದು, ಕೆಲ ಹೊತ್ತಿನಲ್ಲೇ ಅಲ್ಲಿಗೆ ತಲುಪಲಿದೆ. ಆ ಬಳಿಕ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಸಚಿವರುಗಳಾದ ಸುನೀಲ್‌ ಕುಮಾರ್‌ ಹಾಗೂ ಅಂಗಾರ ಅವರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕೂಡಾ ಇದರಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.