Thursday, January 23, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಕಾಸರಗೋಡಿನಿಂದ ಅಂತಿಮ ನಮನ ಸಲ್ಲಿಸಲು ಬಂದ ಪಿ.ರಮೇಶ್ ಮೇಲೆ ಪೊಲೀಸ್ ಹಲ್ಲೆ; SI ಜಂಬುರಾಜ್, ಬೆಳ್ಳಾರೆ ಪೋಲೀಸ್ ಬಾಲಕೃಷ್ಣ,ಸುಳ್ಯ ಸಿ.ಐ ನವೀನ್ ಚಂದ್ರ ಜೋಗಿ ಮತ್ತು ಇತರ ಪೋಲೀಸರನ್ನು ಅಮಾನತ್ತುಗೊಳಿಸಲು ಹಿಂ.ಜಾ.ವೇ ಆಗ್ರಹ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಜೆಪಿ ಯ ಜಿಲ್ಲಾ ಯುವ ನಾಯಕ ಶ್ರೀ ಪ್ರವೀಣ್ ನೆಟ್ಟಾರ್ ಹತ್ಯೆಯ ವಿಷಯ ತಿಳಿದು ಅಂತಿಮ ನಮನ ಸಲ್ಲಿಸಲು ಕಾಸರಗೋಡಿನಿಂದ ಸಂಘ ಪರಿವಾರದ ಹಿರಿಯ ಸ್ವಯಂಸೇವಕ ಪಿ. ರಮೇಶ್ ರವರು(ಹುಬ್ಬಳ್ಳಿ ಈಗ್ದಾ ಮೈದಾನದಲ್ಲಿ ತಿರಂಗಾ ಹಾರಿಸಿದ ತಂಡದಲ್ಲಿದ್ದರು) ಬಂದು ಅಂತಿಮ ನಮನ ಸಲ್ಲಿಸಿ ಬೆಳ್ಳಾರೆ ಪೇಟೆಯಲ್ಲಿ ನಿಂತಿದ್ದ ಸಂದರ್ಭ ಯಾವುದೇ ಕಾರಣ ವಿಲ್ಲದೆ ಅವರೊಬ್ಬ ಹಿರಿಯರು ಎಂದು ನೋಡದೆ ಅವರ ಮೇಲೆ ಹಲ್ಲೆ ನಡೆಸಿದ್ದು ಈ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತಿದೆ. ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದ ಎರಡನೇ ಅಮಾನವೀಯ ಕೃತ್ಯದ ದೃಶ್ಯವೂ ಸೆರೆಯಾಗಿದೆ.

ಪೊಲೀಸರ ಈ ಕೃತ್ಯವನ್ನು ಹಿಂದು ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದ್ದು,ಅವರ ಮೇಲೆ ಲಾಠಿಯಿಂದ ಹಲ್ಲೆ ಮಾಡಿದ ಸುಬ್ರಮಣ್ಯ ಪೊಲೀಸ್ ಠಾಣೆ SI ಜಂಬುರಾಜ್,ಬೆಳ್ಳಾರೆ ಪೋಲಿಸ್ ಬಾಲಕೃಷ್ಣ, ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಚಂದ್ರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಿಂದು ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ಆಗ್ರಹಿಸಿದೆ.

ಒಂದು ವೇಳೆ ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನ ಉಗ್ರ ಪ್ರತಿಭಟನೆ ಮಾಡಬೇಕಾದೀತು ಎಂದು ಈ ಮೂಲಕ ಎಚ್ಚರಿಕೆ ನೀಡಿದೆ.