ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕಾಗುವ ಅಪಮಾನವನ್ನು ತಡೆಗಟ್ಟಲು, ಪ್ಲಾಸ್ಟಿಕ್ ಧ್ವಜಗಳ ಮಾರಾಟ ಮತ್ತು ರಾಷ್ಟ್ರ ಧ್ವಜಕ್ಕಾಗುವ ಅಪಮಾನವನ್ನು ತಡೆಗಟ್ಟುವ ಉದ್ದೇಶದಿಂದ ಉಪ್ಪಿನಂಗಡಿಯ ವಿವಿಧೆಡೆಗಳಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ ! – ಕಹಳೆ ನ್ಯೂಸ್
ರಾಷ್ಟ್ರ ಧ್ವಜವು ರಾಷ್ಟ್ರದ ಭಾವೈಕ್ಯದ ಸಂಕೇತವಾಗಿದೆ. ! ಆಗಸ್ಟ್ ೧೫ ಮತ್ತು ಜನವರಿ ೨೬ ರಂದು, ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಪ್ರದರ್ಶಿಸಲಾಗುತ್ತದೆ; ಆದರೆ ಅದೇ ದಿನ, ಅದೇ ಕಾಗದದ/ಪ್ಲಾಸ್ಟಿಕ್ನ ಸಣ್ಣ ಸಣ್ಣ ರಾಷ್ಟ್ರಧ್ವಜಗಳು ರಸ್ತೆಗಳು, ಕಸ ಮತ್ತು ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬರುತ್ತದೆ. ಪ್ಲಾಸ್ಟಿಕ್ ಧ್ವಜಗಳು ಬೇಗನೇ ನಾಶವಾಗುವುದಿಲ್ಲ, ಆದ್ದರಿಂದ ಅನೇಕ ದಿನಗಳವರೆಗೆ ಈ ರಾಷ್ಟ್ರಧ್ವಜಗಳ ಅವಮಾನವನ್ನು ನೋಡಬೇಕಾಗುತ್ತದೆ.
ಹಾಗಾಗಿ ಸರಕಾರದ ಅಧಿನಿಯಮಗಳನ್ನು ಧಿಕ್ಕರಿಸಿ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವ ಮಾರಾಟಗಾರರು ಹಾಗೂ ಧ್ವಜ ಸಂಹಿತೆ ಪ್ರಕಾರ ಧ್ವಜವನ್ನು ಗೌರವಿಸದ ಜನರು, ಸಂಸ್ಥೆಗಳು ಮತ್ತು ಗುಂಪುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಉಪ್ಪಿನಂಗಡಿಯ ಆರಕ್ಷಕ ಠಾಣೆಗೆ ಹೆಡ್ ಕಾಂಸ್ಟೇಬಲ್ ದೇನಿಕಾ ಇವರಿಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮನವಿಯನ್ನು ನೀಡಲಾಯಿತು. ಈ ವೇಳೆಯಲ್ಲಿ ಧರ್ಮಪ್ರೇಮಿಗಳಾದ ಶ್ರೀ. ಸೀತಾರಾಮ ಆಳ್ವ, ಶ್ರೀ. ಸುರೇಶ್ ಮಣ್ಣಾಜೆ, ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಾದ ಶ್ರೀ. ಚಂದ್ರಶೇಖರ ಪಣಿತೋಟ, ಶ್ರೀ. ಧರ್ಣಪ್ಪ ಪ್ರಶಾಂತ್ ಎನ್ಮಾಡಿ ಇವರು ಉಪಸ್ಥಿತರಿದ್ದರು.