ಪ್ರವೀಣ್ ಹತ್ಯೆ ಖಂಡಿಸಿ ಉಡುಪಿ ಬೈಲಕೆರೆ ವಾರ್ಡ್ ನಲ್ಲಿ ಯುವ ಮೋರ್ಚಾದ ಏಳು ಜನ ಕಾರ್ಯಕರ್ತರ ಸಾಮೂಹಿಕ ರಾಜೀನಾಮೆ – ಕಹಳೆ ನ್ಯೂಸ್
ಉಡುಪಿ: ಬೆಳ್ಳಾರೆಯಲ್ಲಿ ಹಿಂದು ಕಾರ್ಯಕರ್ತ, ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆಗೆ ಸಂಬಂಧಿಸಿದಂತೆ ಇದೀಗ ಬಿಜೆಪಿ ಸರಕಾರಕ್ಕೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪಕ್ಷದ ಕಾರ್ಯಕರ್ತರೇ ಬಿಸಿ ಮುಟ್ಟಿಸಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆಯನ್ನು ಖಂಡಿಸಿ ಬಿಜೆಪಿ ಉಡುಪಿ ಬೈಲಕೆರೆ ವಾರ್ಡ್ ನಲ್ಲಿ ಏಳು ಜನ ಕಾರ್ಯಕರ್ತರು ಪಕ್ಷದ ಜವಾಬ್ದಾರಿಗಳಿಗೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.
ಬಿಜೆಪಿ ಆಡಳಿತ ರಾಜ್ಯ ಸರಕಾರದಲ್ಲಿ ಹಿಂದು ಕಾರ್ಯಕರ್ತರಿಗೆ ಅಸುರಕ್ಷತೆ ಕಾರಣ ಹಿಂದು ಕಾರ್ಯಕರ್ತ ಪ್ರವೀಣ್ ಹತ್ಯೆ ಮನಸ್ಸಿಗೆ ನೋವುಂಟು ಮಾಡಿದೆ. ಹಿಂದೂ ಕಾರ್ಯಕರ್ತರ ಸುರಕ್ಷತೆ ಬಗ್ಗೆ ರಾಜ್ಯ ಸರಕಾರದ ಮೇಲೆ ವಿಶ್ವಾಸ ಕಳೆದು ಹೋಗಿದೆ. ಹೀಗಾಗಿ ಅತ್ಯಂತ ನೋವಿನಿಂದ ಕಠಿಣ ಕ್ರಮ ತೆಗೆದುಕೊಂಡಿದ್ದೇವೆ. ಇದು ನಮ್ಮ ವೈಯಕ್ತಿಕ ನಿರ್ಧಾರವಾಗಿದ್ದು, ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ವಿಮುಕ್ತ ಮಾಡಿ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರಿಗೆ ಕಾರ್ಯಕರ್ತರಾದ ಬೈಲಕೆರೆ ವಾರ್ಡ್‍ನ ವಿಜಯಪ್ರಕಾಶ್, ಶರತ್ ಕುಮಾರ್, ಅರುಣ್ ಜತ್ತನ್, ಸತೀಶ್ ಆರ್ ಪೂಜಾರಿ ವಿಕಿತಾ ಸುರೇಶ್, ಮಂಜುನಾಥ, ಪ್ರಶಾಂತ್ ರಾಜೀನಾಮೆ ಪತ್ರ ನೀಡಿದರು.