Recent Posts

Tuesday, January 21, 2025
ಸುದ್ದಿ

ಪ್ರವೀಣ್ ಹತ್ಯೆ ಖಂಡಿಸಿ ಕೊಡಿಪಾಡಿ ಗ್ರಾಮದ ಬೂತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಮನ್ಮಥ ಶೆಟ್ಟಿ – ಕಹಳೆ ನ್ಯೂಸ್

ಪುತ್ತೂರು : ಪ್ರವೀಣ್ ಹತ್ಯೆ ಖಂಡಿಸಿ ಕೊಡಿಪಾಡಿ ಗ್ರಾಮದ ಬೂತ್ ಅಧ್ಯಕ್ಷ ಮನ್ಮಥ ಶೆಟ್ಟಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ರಾಧಕೃಷ್ಣ ಆಳ್ವರಿಗೆ, ಮನ್ಮಥ ಶೆಟ್ಟಿ ರಾಜೀನಾಮೆ ಪತ್ರ ನೀಡಿದ್ದಾರೆ. ಕಳೆದ ವಿಧಾನಸಭೆ, ಲೋಕಸಭೆ, ಗ್ರಾಮ ಪಂಚಾಯತ್‍ಯಲ್ಲಿ ಪಕ್ಷಕ್ಕೆ ನಿಷ್ಠೆಯಿಂದ ದುಡಿದು, ನನಗೆ ನೀಡಿರುವ ಜವಾಬ್ದಾಗೆ ನ್ಯಾಯ ಒದಗಿಸಿ, ಕೆಲಸ ಮಾಡಿ ಪಕ್ಷವನ್ನ ಗೆಲ್ಲಿಸುವಲ್ಲಿ ಶ್ರಮ ಪಟ್ಟಿದ್ದೇನೆ. ಹಿಂದುತ್ವವೇ ಧ್ಯೇಯ ವಾಕ್ಯ ಎಂಬ ನಿಟ್ಟಿನಲ್ಲಿ, ಮತಯಾಚಿಸಿ ಪ್ರಸ್ತುತ ಅಧಿಕಾರಕ್ಕೆ ಬಂದ ಮೇಲೆ, ಹಿಂದುಗಳಿಗೆ ರಕ್ಷಣೆ ಮತ್ತು ಹಿಂದಯಗಳ ಸಾವಿಗೆ ನ್ಯಾಯ ನೀಡಲಾಗದೇ ಕಠಿಣ ಕ್ರಮ ಎಂಬುದು ಕೇವಲ ಭರವಸೆಯಾಗಿಯೇ ಉಳಿದಿರುವ ಕಾರಣ ಈ ಜವಾಬ್ದಾರಿಯಲ್ಲಿ ಮುಂದುವರಿಯುವುದು ಉಚಿತವಲ್ಲ. ಪ್ರಸ್ತುತ ವಿದ್ಯಾಮಾನಗಳನ್ನು ಗಮನಿಸಿ ಬೇಸರದಿಂದ ನನ್ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಜೀನಾಮೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು