Friday, November 22, 2024
ಸುದ್ದಿ

ಅಂತು ಇಂತು ಕಾಸರಗೋಡಿನಲ್ಲಿ ನಿಲುಗಡೆ ಕಂಡ ಅಂತ್ಯೋದಯ ರೈಲು..! – ಕಹಳೆ ನ್ಯೂಸ್

ಕಾಸರಗೋಡು, ಜು 06: ಕೊನೆಗೂ ಮಂಗಳೂರು – ಕಾಸರಗೋಡು ಅಂತ್ಯೋದಯ ರೈಲಿಗೆ ಕಾಸರಗೋಡಿನಲ್ಲಿ ಜು.೦೬ ರಂದು ಶುಕ್ರವಾರ ನಿಲುಗಡೆ ಲಭಿಸಿದೆ. ಕಾಸರಗೋಡಿನಲ್ಲಿ ನಿಲುಗಡೆ ನೀಡದಿರುವುದರಿಂದ ಪ್ರತಿಭಟನೆ ಮತ್ತು ಆಕ್ರೋಶ ಕೇಳಿ ಬಂದಿತ್ತು .

ಈ ಹಿನ್ನಲೆಯಲ್ಲಿ ಕೊನೆಗೂ ರೈಲ್ವೆ ಇಲಾಖೆ ಕಾಸರಗೋಡಿನಲ್ಲಿ ನಿಲುಗಡೆ ಒದಗಿಸಿದೆ. ಕಾಸರಗೋಡು ಶಾಸಕ ಎನ್ . ಎ ನೆಲ್ಲಿಕುನ್ನು ಅಪಾಯದ ಚೈನ್ ನಿಲುಗಡೆ ಗೊಳಿಸುವ ಮೂಲಕ ಗಮನ ಸೆಳೆದಿದ್ದರು. ಕಾಸರಗೋಡು ಸಂಸದ ಪಿ . ಕರುಣಾಕರನ್ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸುವ ಮುನ್ನೆಚ್ಚರಿಕೆ ಜೊತೆಗೆ ರಾಜ್ಯಸಭಾ ಸದಸ್ಯ ವಿ . ಮುರಳೀಧರನ್ ಕೇಂದ್ರ ರೈಲ್ವೆ ಸಚಿವರ ಗಮನಕ್ಕೆ ತಂದಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳಿಗ್ಗೆ 7.50 ಕ್ಕೆ ಕಾಸರಗೋಡು ನಿಲ್ದಾಣಕ್ಕೆ ತಲಪಿದ ರೈಲಿಗೆ ಯು ಡಿ ಎಫ್ , ಎಲ್ ಡಿ ಎಫ್ ಹಾಗೂ ಬಿಜೆಪಿ ಹಾಗೂ ಇತರ ರಾಜಕೀಯ ಪಕ್ಷದ ಮುಖಂಡರು , ನಾಗರಿಕರು ರೈಲು ನಿಲ್ದಾಣಕ್ಕೆ ತಲುಪಿ ಸ್ವಾಗತ ಕೋರಿ ಸಿಹಿ ತಿಂಡಿ ಹಂಚಿದರು . ಯು ಡಿ ಎಫ್ ನಿಂದ ಶಾಸಕ ಎನ್. ಎ ನೆಲ್ಲಿಕುನ್ನು , ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಜಿದ್ ಮವ್ವಾಲ್ ನೇತೃತ್ವದಲ್ಲಿ , ಬಿಜೆಪಿ ವತಿಯಿಂದ ರಾಜ್ಯಸಭಾ ಸದಸ್ಯ ವಿ . ಮುರಳೀಧರನ್ , ಜಿಲ್ಲಾಧ್ಯಕ್ಪ ಕೆ . ಶ್ರೀಕಾಂತ್ , ಸುರೇಶ್ ಕುಮಾರ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸಿಪಿಎಂ ವಲಯ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಕೆ . ರವೀಂದ್ರನ್ ಮೊದಲಾದವರು ನೇತೃತ್ವ ದಲ್ಲಿ ರೈಲಿಗೆ ಸ್ವಾಗತ ಕೋರಲಾಯಿತು.