Thursday, January 23, 2025
ಸುದ್ದಿ

ಸ್ವಾತಂತ್ರ‍್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕಾಗುವ ಅಪಮಾನವನ್ನು ತಡೆಗಟ್ಟಲು, ಪ್ಲಾಸ್ಟಿಕ್ ಧ್ವಜಗಳ ಮಾರಾಟ ಮತ್ತು ರಾಷ್ಟ್ರ ಧ್ವಜಕ್ಕಾಗುವ ಅಪಮಾನವನ್ನು ತಡೆಗಟ್ಟುವ ಉದ್ದೇಶದಿಂದ ಮೂಲ್ಕಿಯ ತಹಶೀಲ್ದಾರ ರಿಗೆ ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ !.. – ಕಹಳೆ ನ್ಯೂಸ್

ರಾಷ್ಟ್ರ ಧ್ವಜವು ರಾಷ್ಟ್ರದ ಭಾವೈಕ್ಯದ ಸಂಕೇತವಾಗಿದೆ. ! ಆಗಸ್ಟ್ 15 ಮತ್ತು ಜನವರಿ 26 ರಂದು, ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಪ್ರದರ್ಶಿಸಲಾಗುತ್ತದೆ; ಆದರೆ ಅದೇ ದಿನ, ಅದೇ ಕಾಗದದ/ಪ್ಲಾಸ್ಟಿಕ್‌ನ ಸಣ್ಣ ಸಣ್ಣ ರಾಷ್ಟ್ರಧ್ವಜಗಳು ರಸ್ತೆಗಳು, ಕಸ ಮತ್ತು ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬರುತ್ತದೆ. ಪ್ಲಾಸ್ಟಿಕ್ ಧ್ವಜಗಳು ಬೇಗನೇ ನಾಶವಾಗುವುದಿಲ್ಲ, ಆದ್ದರಿಂದ ಅನೇಕ ದಿನಗಳವರೆಗೆ ಈ ರಾಷ್ಟ್ರಧ್ವಜಗಳ ಅವಮಾನವನ್ನು ನೋಡಬೇಕಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗಾಗಿ ಸರಕಾರದ ಅಧಿನಿಯಮಗಳನ್ನು ಧಿಕ್ಕರಿಸಿ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವ ಮಾರಾಟಗಾರರು ಹಾಗೂ ಧ್ವಜ ಸಂಹಿತೆ ಪ್ರಕಾರ ಧ್ವಜವನ್ನು ಗೌರವಿಸದ ಜನರು, ಸಂಸ್ಥೆಗಳು ಮತ್ತು ಗುಂಪುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಲ್ಕಿ ತಹಸೀಲ್ದಾರಾದ ಶ್ರೀ ಗುರುಪ್ರಸಾದ್ ಇವರಿಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮನವಿಯನ್ನು ನೀಡಲಾಯಿತು. ಈ ವೇಳೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮಿತಿ ಸಮನ್ವಕರಾದ ಶ್ರೀ. ಚಂದ್ರ ಮೊಗೇರ, ಉದ್ಯಮಿಗಳಾದ ಶ್ರೀ. ಎಂ ಜೆ ಶೆಟ್ಟಿ ಕುಲಾಯಿ ,ಶ್ರೀ. ಭಾಸ್ಕರ್ ಮುಲ್ಕಿ , ಶನೇಶ್ವರ ಸೇವಾ ಸಮಿತಿ ಶಿವಾಜಿನಗರ ಇದರ ಅಧ್ಯಕ್ಷರು ಶ್ರೀ. ಸುಬ್ರಹ್ಮಣ್ಯ ರೆಡ್ಡಿ ,ಧರ್ಮ ಪ್ರೇಮಿಗಳಾದ ಶ್ರೀ. ಜಯಂತ್ ಸುರತ್ಕಲ್ ,ಶ್ರೀ. ಉಮೇಶ್ ಸುರತ್ಕಲ್ ,ಶ್ರೀ. ಧನರಾಜ್, ಶ್ರೀ. ಗಣೇಶ್, ಶ್ರೀ. ಸಿದ್ದಣ್ಣ ತಲ್ವಾರ್ ಕೊಲ್ನಾಡ್ ,ಶ್ರೀ. ರೂಪೇಶ್ ಶೆಟ್ಟಿ, ಸೌ.ಶೋಭಾ ಚಂದ್ರಶೇಖರ್ ಪಡುಬಿದ್ರಿ, ಶ್ರೀ. ವಿನೋದ್ ಬೊಳುರು ಮತ್ತಿತರರು ಉಪಸ್ಥಿತರಿದ್ದರು.